ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.
Published 24 ಏಪ್ರಿಲ್ 2024, 14:16 IST
Last Updated 24 ಏಪ್ರಿಲ್ 2024, 14:16 IST
ಅಕ್ಷರ ಗಾತ್ರ

ನಾಶ್‌ವಿಲ್ಲೆ, ಅಮೆರಿಕ: ಇನ್ಮುಂದೆ ಅಮೆರಿಕದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಿಕ್ಷಕರು ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು.

ಹೌದು, ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.

ಕಳೆದ ವರ್ಷ ನಾಶ್‌ವಿಲ್ಲೆಯ ಶಾಲೆಯೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಶಾಲಾ ಸಿಬ್ಬಂದಿ ಮೃತರಾಗಿದ್ದರು. ಈ ಘಟನೆ ಬೆನ್ನಲ್ಲೇ ಶಾಲೆಗಳಿಗೆ ಹ್ಯಾಂಡ್‌ಗನ್‌ಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬ ಕೂಗು ಶಿಕ್ಷಕರ ಕಡೆಯಿಂದ ಎದ್ದಿತ್ತು.

ಶಾಸನಸಭೆಯಲ್ಲಿ ಮಸೂದೆ ಮಂಡನೆಯಾಗಿ ಕಾನೂನಾಗಿರುವುದರಿಂದ ಇನ್ಮುಂದೆ ಶಿಕ್ಷಕರು ನಿಗದಿತ ಕ್ರಮಗಳನ್ನು ಅನುಸರಿಸಿ ಬಂದೂಕುಗಳನ್ನು ತೆಗೆದುಕೊಂಡು ಶಾಲೆಗೆ ಹೋಗಬಹುದು.

ಪೊಲೀಸರ ಅನುಮತಿಯೊಂದಿಗೆ 40 ಗಂಟೆಗಳ ತರಬೇತಿ, ಮಾನಸಿಕ ಸ್ಥಿತಿಯ ಬಗ್ಗೆ ಮನಶಾಸ್ತ್ರಜ್ಞರ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಪೂರೈಸಿದ ಶಿಕ್ಷಕರು, ಇತರೆ ಸಿಬ್ಬಂದಿ ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

ಆದರೆ, ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪರ–ವಿರೋಧದ ಪ್ರತಿಭಟನೆಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT