ಏನಿದು ನೆಟ್‌ಜರಿಮ್ ಕಾರಿಡಾರ್?
ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದಕ್ಷಿಣ ಗಾಜಾ ಹಾಗೂ ಉತ್ತರ ಗಾಜಾವನ್ನು ಬೇರ್ಪಡಿಸುವಂತೆ ಈ ಕಾರಿಡಾರ್ ಅನ್ನು ನಿರ್ಮಿಸಿತ್ತು. ಇದು 2 ಕಿ.ಮೀ ಅಗಲ ಮತ್ತು 6.ಕಿ.ಮೀ ಉದ್ದವಿದೆ. ಉತ್ತರ ಗಾಜಾವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಸಲುವಾಗಿಯೇ ಈ ಕಾರಿಡಾರ್ ನಿರ್ಮಾಣ ಮಾಡಿದೆ ಎನ್ನಲಾಗಿತ್ತು. ಈಗ ಪ್ಯಾಲೆಸ್ಟೀನಿಯನ್ನರು ಇದೇ ಕಾರಿಡಾರ್ ಮೂಲಕ ತಮ್ಮ ಊರಿಗೆ ಮರಳುತ್ತಿದ್ದಾರೆ.