ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಗಾಜಾಗೆ ಸ್ಟಾರ್‌ಲಿಂಕ್ ಮೂಲಕ ಅಂತರ್ಜಾಲ ಸಂಪರ್ಕ: ಮಸ್ಕ್‌

Published 28 ಅಕ್ಟೋಬರ್ 2023, 14:58 IST
Last Updated 28 ಅಕ್ಟೋಬರ್ 2023, 14:58 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಯುದ್ಧ ಪೀಡಿತ ಗಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೇವಾ ಸಂಸ್ಥೆಗಳಿಗಾಗಿ ಸ್ಟಾರ್‌ಲಿಂಕ್ ಮೂಲಕ ಅಂತರ್ಜಾಲ ಸಂಪರ್ಕ ನೀಡುವುದಾಗಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್‌ ಹೇಳಿದ್ದಾರೆ.

ಗಾಜಾ ಪಟ್ಟಿಯಲ್ಲಿ ಕಳೆದ ರಾತ್ರಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿದ ಕ್ರಮವನ್ನು ಯಾರಾದರೂ ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ ಎಂದು ಅಮೆರಿಕದ ನಾಯಕಿ ಅಲೆಕ್ಸಾಂಡ್ರಿಯಾ ಒಕಾಷಿಯೊ ಕಾರ್ಟ್ಜ್ (ಎಒಸಿ) ಕೇಳಿದ್ದರು. 

‘22 ಲಕ್ಷ ಜನರು ಇರುವ ಪ್ರದೇಶದಲ್ಲಿ ಅಂತರ್ಜಾಲ ಕಡಿತಗೊಳಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ, ಸ್ವಯಂ ಸೇವಕರು ಸಂಕಷ್ಟದಲ್ಲಿರುವ ಮುಗ್ದ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇಂಥ ಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ. ಐತಿಹಾಸಿಕವಾಗಿ ಅಮೆರಿಕವು ಇಂಥ ಪದ್ಧತಿಯನ್ನು ಖಂಡಿಸುತ್ತದೆ’ ಎಂದು ಮೈಕ್ರೊ ಬ್ಲಾಗಿಂಗ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್‌, ಸ್ಟಾರ್‌ಲಿಂಕ್ ಮೂಲಕ ಅಂತರ್ಜಾಲ ಸಂಪರ್ಕ ನೀಡುವ ಭರವಸೆ ನೀಡಿದ್ದಾರೆ.

ದೂರದ ಪ್ರದೇಶಗಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸುವ ಉದ್ದೇಶದೊಂದಿಗೆ ಸ್ಟಾರ್‌ಲಿಂಕ್‌ ಉಪಗ್ರಹಗಳ ಸಮೂಹವನ್ನು ಸ್ಪೇಸ್‌ಎಕ್ಸ್‌ ಅಭಿವೃದ್ಧಿಪಡಿಸಿದೆ. ಇದರಲ್ಲಿ 42 ಸಾವಿರ ಉಪಗ್ರಹಗಳಿದ್ದು, ಮೆಗಾಕಾನ್‌ಸ್ಟಲೇಷನ್ ಎಂದೇ ಕರೆಯಲಾಗುವ ಈ ಉಪಗ್ರಹಗಳ ಪುಂಜವು ಸುಮಾರು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಬಲ್ಲದು.

ಶುಕ್ರವಾರದಿಂದ ಭೂಸೇನಾ ದಾಳಿಯನ್ನು ಆರಂಭಿಸಿದ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಇಸ್ರೇಲ್ ಸೇನೆಯು ಭೂ, ವಾಯು ಹಾಗೂ ಜಲಮಾರ್ಗದ ಮೂಲಕ ದಾಳಿ ನಡೆಸುತ್ತಿರುವುದನ್ನು ನೋಡಿದರೆ ರಕ್ತಸಿಕ್ತ ಪ್ರತೀಕಾರ ತೀರಿಸಿಕೊಳ್ಳಲು ಮತ್ತ ಹತ್ಯಾಕಾಂಡವನ್ನೇ ನಡೆಸಲು ಉದ್ದೇಶಿಸಿರುವಂತಿದೆ‘ ಪ್ಯಾಲೆಸ್ಟೀನ್‌ ಆರೋಪಿಸಿದೆ.

ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಕಡಿತದಿಂದಾಗಿ ತುರ್ತು ಸೇವೆ ಸಂಖ್ಯೆಯಾದ 101 ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಗಾಯಾಳುಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗಿದೆ. ಮಿತಿಮೀರಿದ ಬಾಂಬ್ ದಾಳಿಯಿಂದ ಅಂತರರಾಷ್ಟ್ರೀಯ ಸಂಪರ್ಕವನ್ನೇ ಗಾಜಾ ಕಡಿದುಕೊಂಡಿದೆ ಎಂದು ಪ್ಯಾಲೆಸ್ಟೀನ್‌ ದೂರಸಂಪರ್ಕ ಪೂರೈಕೆದಾರ ಸಂಸ್ಥೆ ಜವಾಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT