ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಸೈನ್ಯದಿಂದ ಮೂವರು ಶಸ್ತ್ರಸಜ್ಜಿತ ಪ್ಯಾಲೆಸ್ತೀನಿಯರ ಹತ್ಯೆ

Published 13 ಜನವರಿ 2024, 16:02 IST
Last Updated 13 ಜನವರಿ 2024, 16:02 IST
ಅಕ್ಷರ ಗಾತ್ರ

ಜೆರುಸಲೇಂ: ತನ್ನ ವಶದಲ್ಲಿರುವ ವೆಸ್ಟ್ ಬ್ಯಾಂಕ್ ಜನವಸತಿ ಪ್ರದೇಶಕ್ಕೆ ನುಗ್ಗಲು ಯತ್ನಿಸಿದ ಮೂವರು ಶಸ್ತ್ರಸಜ್ಜಿತ ಪ್ಯಾಲೆಸ್ಟೀನಿಯರನ್ನು ತಮ್ಮ ಪಡೆಗಳು ಹತ್ಯೆ ಮಾಡಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಹತ್ಯೆಗೊಳಗಾದವರ ಪೈಕಿ ಇಬ್ಬರಿಗೆ 16 ವರ್ಷ, ಮತ್ತೊಬ್ಬರಿಗೆ 19 ವರ್ಷ ವಯಸ್ಸಾಗಿತ್ತು ಎಂದು ಪ್ಯಾಲೆಸ್ಟೀನ್‌ನ ಅಧಿಕೃತ ಸುದ್ದಿ ಸಂಸ್ಥೆ ವಾಫಾ ತಿಳಿಸಿದೆ.

ಪ್ಯಾಲೆಸ್ಟೀನ್‌ನ ಹೀಬ್ರಾನ್ ನಗರದ ಸನಿಹದಲ್ಲಿರುವ ಅಡೋರಾ ಜನವಸತಿ ಪ್ರದೇಶದ ಬೇಲಿಯನ್ನು ಭೇದಿಸಿ ದಾಳಿಕೋರರು ಮುನ್ನುಗ್ಗಲು ಯತ್ನಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT