ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಅಪಘಾತ: ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಸಾವು

Published 22 ಮೇ 2024, 9:22 IST
Last Updated 22 ಮೇ 2024, 9:22 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಜಾರ್ಜಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. 

ಜಾರ್ಜಿಯಾ ರಾಜ್ಯದ ಅಲ್ಫಾರೆಟ್ಟಾದಲ್ಲಿ ಕಳೆದ ವಾರ ಕಾರು ಅಪಘಾತ ಸಂಭವಿಸಿತ್ತು. ಮೃತ ವಿದ್ಯಾರ್ಥಿಗಳನ್ನು ಆರ್ಯನ್ ಜೋಶಿ, ಶ್ರೀಯಾ ಅವಸರಲಾ ಹಾಗೂ ಅನ್ವಿ ಶರ್ಮಾ ಎಂದು ಗುರುತಿಸಲಾಗಿದೆ. ರಿತ್ವಿಕ್‌ ಸೋಮಪಲ್ಲಿ ಮತ್ತು ಮೊಹಮ್ಮದ್ ಲಿಯಾಕತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಅಮೆರಿಕ ಪೊಲೀಸರು ಶಂಕಿಸಿದ್ದಾರೆ. 18 ವರ್ಷ ವಯಸ್ಸಿನ ಐವರು ವಿದ್ಯಾರ್ಥಿಗಳು ಆಲ್ಫಾರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು.

ಈ ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT