ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿನಲ್ಲಿ ವಾಯುಮಾಲಿನ್ಯ ಭಾರಿ ಏರಿಕೆಯಾಗಿದ್ದು, ಇಡೀ ನಗರವನ್ನು ದಟ್ಟ ಹೊಗೆ ಆವರಿಸಿಕೊಂಡಿದೆ.

ಹೊಗೆಯ ಹೊದಿಕೆಗೆ ಕಟ್ಟಡಗಳು ಕಣ್ಮರೆಯಾಗಿದ್ದು, ಮಲಿನ ಗಾಳಿಯಿಂದಾಗಿ ಲಕ್ಷಾಂತರ ಜನ ತೊಂದರೆ ಅನುಭವಿಸುವಂತಾಗಿದೆ. ವಿಶ್ವದ ಅತಿ ಮಲಿನ ನಗರಗಳ ಪಟ್ಟಿಯಲ್ಲಿ ಹನೋಯಿ ಮೊದಲ ಸ್ಥಾನದಲ್ಲಿದೆ.
.ದೆಹಲಿ | ವಾಯು ಮಾಲಿನ್ಯ ತಗ್ಗಿಸಲು ಟ್ರಕ್–ಮೌಂಟ್ ವಾಟರ್ ಸ್ಪ್ರಿಂಕ್ಲರ್ ಬಳಕೆ.
ಜನರಿಗೆ ಮಾಸ್ಕ್ ಧರಿಸುವಂತೆ, ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ಸ್ಥಳೀಯಾಡಳಿತ ಸೂಚನೆ ನೀಡಿದೆ. ಉಸಿರಾಡಲೂ ಸಾಧ್ಯವಾಗುತ್ತಿಲ್ಲ ಎಂದು ಜನ ಅಲವತ್ತುಕೊಂಡಿದ್ದಾರೆ.

ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಆತಂಕವೂ ಜನರದ್ದು.

‘ಗಾಳಿಯ ಗುಣಮಟ್ಟ ಭಾರಿ ಕಳಪೆಯಾಗಿದೆ. ಸಲೀಸಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಸದಾ ಮಾಸ್ಕ್ ಧರಿಸಿಯೇ ಇರಬೇಕು. ಕಚೇರಿಗೆ ಬೈಕ್ನಲ್ಲಿ ಹೋಗಲಾಗದೇ, ದುಬಾರಿಯಾದರೂ ಟ್ಯಾಕ್ಸಿಯಲ್ಲಿ ಹೋಗುವ ಪರಿಸ್ಥಿತಿ ಇದೆ’ ಎಂದು ಉದ್ಯೋಗಿಯೊಬ್ಬರು ಪರಿಸ್ಥಿತಿಯ ಭೀಕರತೆಯನ್ನು ಬಿಚ್ಚಿಟ್ಟರು.
.ವಾಯು ಮಾಲಿನ್ಯ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ.
ಭಾರಿ ಪ್ರಮಾಣದ ನಿರ್ಮಾಣ ಕಾಮಗಾರಿಗಳು ಹಾಗೂ ಭಾರಿ ಸಂಖ್ಯೆಯಲ್ಲಿ ಬೈಕ್, ಕಾರುಗಳು ಹೊರಸೂಸುತ್ತಿರುವ ಹೊಗೆಯಿಂದಾಗಿ ಹನೋಯಿನಲ್ಲಿ ವಾತಾವರಣ ಹದಗೆಟ್ಟಿದೆ. ಜೊತೆಗೆ ಕಲ್ಲಿದ್ದಲು ಕಾರ್ಖಾನೆಗಳಿಂದಾಗುವ ಇಂಗಾಲ ಹೊರಸೂಸುವಿಕೆ, ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈಶಾನ್ಯ ಮಾನ್ಸೂನ್ನ ಮಳೆ ಹಾಗೂ ಭಾರಿ ಗಾಳಿ ಬೀಸಿದರೆ ದಟ್ಟೈಸಿರುವ ಹೊಗೆ ತಿಳಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ನಗರದಲ್ಲಿ ವಾಡಿಕೆಯ ಮಳೆ ಬರುವುದು ಮಾರ್ಚ್ನಿಂದ.
.ಗೆಳೆಯನನ್ನು ಬಾಡಿಗೆ ಪಡೆಯುತ್ತಿರುವ ವಿಯೆಟ್ನಾಂ ಯುವತಿಯರು! ಏಕೆ ಈ ಟ್ರೆಂಡ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.