ವಾಷಿಂಗ್ಟನ್ (ರಾಯಿಟರ್ಸ್): ಟೊಯೋಟಾ ಮೋಟಾರ್ ಕಂಪನಿ ತನ್ನ ಉತ್ತರ ಅಮೆರಿಕದ ಆಟೋ ಪ್ಲಾಂಟ್ಗಳನ್ನು ಮೇ 4 ಮುಚ್ಚಲು ತೀರ್ಮಾನಿಸಿದ್ದು, ತನ್ನ 5 ಸಾವಿರ ಅರೆಕಾಲಿಕ ಕಾರ್ಮಿಕರಿಗೆ ಸಂಬಳ ನಿಲ್ಲಿಸುವುದಾಗಿ ಪ್ರಕಟಿಸಿದೆ.

ಅಮೆರಿಕಾದಲ್ಲಿ ಕೊರೊನಾ ಸೋಂಕು ತೀವ್ರವಾಗಿರುವ ಪರಿಣಾಮ ಇಲ್ಲಿರುವ ಜಪಾನ್ ಮೂಲದ ಟೊಯೊಟಾ ಕಂಪನಿ ವಾಹನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಕೆನೆಡಾ, ಮೆಕ್ಸಿಕೋ ಮತ್ತು ಅಮೆರಿಕಾದತನ್ನ ಎಲ್ಲಾ ಆಟೋ ಮೊಬೈಲ್ ಮತ್ತು ಕಾಂಪೊನೆಂಟ್ಸ್ ಪ್ಲಾಂಟ್ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

ಟೊಯೊಟಾ ತನ್ನ ಖಾಯಂ ಕೆಲಸಗಾರರನ್ನು ತೆಗೆದುಹಾಕುವುದಿಲ್ಲ. ಬದಲಿಗೆ ಅರೆಕಾಲಿಕ ಕಾರ್ಮಿಕರಿಗೆ ಗಂಟೆ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹತ್ತು ದಿನಗಳಲ್ಲಿ ಎರಡು ದಿನಗಳ ವೇತನ ನೀಡಲಾಗುವುದುಅಥವಾ ಸಂಬಳ ರಹಿತ ರಜೆಯ ಮೇಲೆ ಹೋಗಬಹುದು ಎಂದು ತಿಳಿಸಿದೆ.

ಟೊಯೊಟಾ ಕಂಪನಿಯು ತನಗೆ 5 ಸಾವಿರ ನೌಕರರನ್ನು ಒದಗಿಸಿದ್ದ ಏಜೆನ್ಸಿಗಳಿಗೇ ವಾಪಸ್ ಕಳುಹಿಸಿಕೊಡುವುದಾಗಿ ತಿಳಿಸಿದೆ. ಈ ಮಧ್ಯೆ ತನ್ನ ನೌಕರರಿಗೆ ಎಲ್ಲಾ ಸವಲತ್ತುಗಳನ್ನು ಕಂಪನಿ ನೀಡುತ್ತದೆ ಎಂದು ತಿಳಿಸಿದೆ.

ಕೊರೊನಾ ಸೋಂಕಿನ ಕಾರಣ ಕಾರುಗಳಿಗೆ ಬೇಡಿಕೆ ಕುಸಿದಿರುವ ಕಾರಣ ಹೊಂಡಾ ಮೊಟಾರ್ ಕಂಪನಿ, ನಿಸಾನ್ ಮೊಟಾರ್ ಕಂಪನಿ ಕೂಡ ಅಮೆರಿಕಾದಸಾವಿರಕ್ಕೂಅಧಿಕ ಮಂದಿ ನೌಕರರನ್ನು ತೆಗೆದುಹಾಕಿರುವುದಾಗಿ ಕಂಪನಿಗಳು ತಿಳಿಸಿವೆ.ಅಲಬಾಮಾ, ಇಂಡಿಯಾನಾ ಮತ್ತು ಓಹಿಯೋದ ಶಾಖೆಗಳಲ್ಲಿ ಸುಮಾರು 18,400 ಕಾರ್ಮಿಕರನ್ನು ಹೊಂದಿರುವ ಹೋಂಡ ಕಂಪನಿಯು ಮಾರ್ಚ್ 23 ರಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮೇ1ರವರೆಗೆ ಕಂಪನಿಯನ್ನು ಮುಚ್ಚಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.ಅಲ್ಲದೆ, ಭಾನುವಾರದ ವೇಳೆಗೆ ಎಲ್ಲಾ ನೌಕರರಿಗೂವೇಳೆಗೆ ಸಂಬಳ ನೀಡುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.