ವಾಷಿಂಗ್ಟನ್: ಯಹೂದಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ತಡೆಯಲು ವಿಫಲ ಹಾಗೂ ಜನಾಂಗೀಯ ತಾರತಮ್ಯದ ಆರೋಪದಡಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದೊಂದಿಗೆ ಬಾಕಿ ಉಳಿದ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಟ್ರಂಪ್ ಸರ್ಕಾರ ಆದೇಶಿಸಿದೆ.

ಸರಳ ದಾಖಲಾತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಹಾರ್ವರ್ಡ್ ನಡುವಿನ ಕಾನೂನು ವ್ಯಾಜ್ಯವನ್ನು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಾಂಸ್ಕೃತಿಕವಾಗಿ ಹೆಚ್ಚು ಪ್ರಗತಿಪರವಾಗಿರುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದೇ ಹೆಸರಾಗಿರುವ ಹಾರ್ವರ್ಡ್ ವಿರುದ್ಧ ಟ್ರಂಪ್ ಸರ್ಕಾರದ ಆರ್ಥಿಕ ಪ್ರಹಾರ ಇದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಏಪ್ರಿಲ್ನಿಂದ ಸುಮಾರು 3.2 ಶತಕೋಟಿ ಅಮೆರಿಕನ್ ಡಾಲರ್ನಷ್ಟು ಅನುದಾನವನ್ನು ಸರ್ಕಾರ ತಡೆಹಿಡಿದಿದೆ. ಜತೆಗೆ ವಿದೇಶಿ ವಿದ್ಯಾರ್ಥಿಗಳ ನೋಂದಣಿಯನ್ನೂ ಸ್ಥಗಿತಗೊಳಿಸಿದೆ.

ಟ್ರಂಪ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ ಆಡಳಿತವು, ತನ್ನ ಸಿಬ್ಬಂದಿ, ಪಠ್ಯ ಮತ್ತು ದಾಖಲಾತಿಯಲ್ಲಿ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ. ಈ ಕುರಿತಂತೆ ನ್ಯಾಯಾಲಯದಲ್ಲಿ ದಾವೆ ಹೂಡಿರುವ ವಿಶ್ವವಿದ್ಯಾಲಯ, ತನಗೆ ಆಗಿರುವ ನಷ್ಟಕ್ಕೆ 3 ಶತಕೋಟಿ ಅಮೆರಿಕನ್ ಡಾಲರ್ನಷ್ಟು ಪರಿಹಾರಕ್ಕೆ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.