ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಲಾನ್ ಮಸ್ಕ್ ನಡುವಿನ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ರಷ್ಯಾ ಶುಕ್ರವಾರ ಹೇಳಿದೆ. ಟ್ರಂಪ್ ಅವರು ಪರಿಸ್ಥಿತಿಯನ್ನು ನಿಭಾಯಿಸಬಲ್ಲರು ಎಂಬ ವಿಶ್ವಾಸವಿದೆ ಎಂದಿದೆ. ‘ಇಬ್ಬರ ನಡುವಿನ ಜಗಳವು ಅಮೆರಿಕದ ಆಂತರಿಕ ವಿಷಯ’ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.