ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನ ಭದ್ರತಾ ಪಡೆಗೆ ಉಗ್ರ ಸಂಘಟನೆ ಪಟ್ಟ: ಅಮೆರಿಕ ಚಿಂತನೆ

Last Updated 8 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇರಾನ್‌ನ ಸೇನೆಯ ಭಾಗವಾಗಿರುವ ರೆವಲ್ಯೂಷನರಿ ಗಾರ್ಡ್‌ ಅನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ಯ ಪಟ್ಟಿಗೆ ಸೇರಿಸಲು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ ಚಿಂತನೆ ನಡೆಸಿದೆ.

ಜಾಗತಿಕ ಮಟ್ಟದಲ್ಲಿ ಇರಾನ್‌ನನ್ನು ಏಕಾಂಗಿಯಾಗಿಸಲು ಅಮೆರಿಕ ಈ ಕ್ರಮಕ್ಕೆ ಮುಂದಾಗಿದ್ದು,ಈ ಕುರಿತು ಶೀಘ್ರ ಘೋಷಣೆ ಹೊರಬೀಳಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮತ್ತು ಅದಕ್ಕೆ ಯಾವುದೇ ರೀತಿಯ ಸಹಕಾರ ಲಭಿಸದಂತೆ ನಿರ್ಬಂಧಿಸಲು ಚಿಂತನೆ ನಡೆಸಲಾಗಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ಬರಾಕ್‌ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ ಇರಾನ್‌ ಜೊತೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು 2018 ಮೇ ತಿಂಗಳಲ್ಲಿ ಟ್ರಂಪ್‌ ರದ್ದು ಮಾಡಿದ್ದರು.

ಇರಾನ್‌ನ ತೈಲ ಮತ್ತು ಬ್ಯಾಂಕಿಂಗ್‌ ವಲಯವನ್ನು ಗುರಿಯಾಗಿಸಿ ಅಮೆರಿಕ ಈಗಾಗಲೇ ನಿರ್ಬಂಧಗಳನ್ನು ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT