ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಲಿತಾಂಶ ಒಪ್ಪಲು ನಿರಾಕರಿಸಿದ್ದು, ‘ನಾವೇ ಗೆದ್ದಿದ್ದೇವೆ’ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಇದು, ನಾವು ಸುಲಭವಾಗಿ ಗೆಲುವು ಸಾಧಿಸಿರುವ ಚುನಾವಣೆ. ದೊಡ್ಡ ಪ್ರಮಾಣದಲ್ಲಿಯೇ ಗೆದ್ದಿದ್ದೇವೆ ಎಂದು ಬುಧವಾರ ಗೆಟ್ಟಿಸ್‌ಬರ್ಗ್‌ನಲ್ಲಿ ಗುಂಪೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.

ಚುನಾವಣೆಯಲ್ಲಿ ಟ್ರಂಪ್ ಅವರು ತಮ್ಮ ಪ್ರತಿಸ್ಪರ್ಧಿ ಜೋ ಬೈಡನ್ ವಿರುದ್ಧ ಪರಾಜಿತರಾಗಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಬೈಡನ್ ವಿಜಯಿಯಾಗಿದ್ದಾರೆ ಎಂದು ಮಂಗಳವಾರವೂ ದೃಢಪಡಿಸಲಾಗಿತ್ತು.

ಟ್ರಂಪ್ ಮತ್ತು ಅವರ ವಕೀಲರೂ ಆದ ನ್ಯೂಯಾರ್ಕ್‌ನ ಮಾಜಿ ಮೇಯರ್ ರೂಡಿ ಗಿಲಾನಿ ಅವರು ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮತ್ತೆ ಚುನಾವಣೆಯ ಫಲಿತಾಂಶದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಅಮೆರಿಕದಲ್ಲಿ ಅಧ್ಯಕ್ಷರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ದೇಶದ ಚುನಾವಣಾ ಅಧಿಕಾರಿಗಳು, ಅಂತರರಾಷ್ಟ್ರೀಯ ವೀಕ್ಷಕರು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದಿದ್ದಾರೆ.

ಟ್ರಂಪ್ ಬೆಂಬಲಿರಾದ ಪೆನ್ಸಿಲ್ವೇನಿಯಾದ ಸಂಸದ ಡೌಗ್ ಮಾಸ್ಟ್ರಿಯಾಂಗೋ ಹಾಗೂ ಇತರೆ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಬುಧವಾರದ ಕಾರ್ಯಕ್ರಮ ಆಯೋಜಿಸಿದ್ದರು. ಟ್ರಂಪ್ 11 ನಿಮಿಷ ಮಾತನಾಡಿದರು. ಬೈಡನ್ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ದೂರಿದರು. ಅರಿಜೋನಾ, ಮಿಚಿಗನ್‌ನಲ್ಲೂ ಇಂಥದೇ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.