ಅಬುಧಾಬಿ: ಯುಎಇಯಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ನೆಲೆ ನಿಲ್ಲಲು ಉಕ್ರೇನ್ ನಾಗರಿಕರಿಗೆ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದುಬೈನಲ್ಲಿನ ಉಕ್ರೇನ್ ರಾಯಭಾರ ಕಚೇರಿ ಘೋಷಣೆ ಮಾಡಿದೆ.

ರಷ್ಯಾ–ಉಕ್ರೇನ್ ಯುದ್ದದಿಂದ ತೊಂದರೆಗೆ ಒಳಗಾದ ಉಕ್ರೇನ್ ನಾಗರಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇದು ಯುಎಇ ದೇಶದ ವಿದೇಶಾಂಗ ಇಲಾಖೆಯ ಸಹಕಾರದೊಡನೆ ಕಾರ್ಯಗತವಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಸಂತೋಷ್ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಒಣ ರಾಜಕಾರಣ: ಕುಮಾರಸ್ವಾಮಿ

ದುಬೈನಲ್ಲಿನ ತಾಸ್‌ಹೀಲ್ ಕೇಂದ್ರಗಳಲ್ಲಿ ಅರ್ಜಿಗಳು ದೊರೆಯಲಿದ್ದು, ಇಲ್ಲಿ ತಾತ್ಕಾಲಿಕವಾಗಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಯುಎಇಯಲ್ಲಿ ವೀಸಾ ಅವಧಿ ಮುಗಿದ ಉಕ್ರೇನ್ ನಾಗರಿಕರಿಗೆ ಒಂದು ವರ್ಷದ ಅವಧಿಗೆ ವೀಸಾ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಯುಎಇ ದೇಶದ ಈ ಸಹಾಯಕ್ಕೆ ನಾವು ನಿಜಕ್ಕೂ ಚಿರಋಣಿಯಾಗಿರುತ್ತೇವೆ ಎಂದು ಉಕ್ರೇನ್ ರಾಯಭಾರ ಕಚೇರಿ ತಿಳಿಸಿದೆ.

ಏತನ್ಮಧ್ಯೆ ಯುಎಇ, ಉಕ್ರೇನ್‌ಗೆ ಸುಮಾರು 30 ಮೆಟ್ರಿಕ್ ಟನ್ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ ಎಂದು ಉಕ್ರೇನ್ ರಾಯಭಾರ ಕಚೇರಿ ಸ್ಮರಿಸಿದೆ.

ಪಾಲಕ್ಕಾಡ್: ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.