ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಬೋಲಾ | ಉಗಾಂಡದಲ್ಲಿ ಹೊಸದಾಗಿ 9 ಪ್ರಕರಣಗಳು ಪತ್ತೆ

Published : 24 ಅಕ್ಟೋಬರ್ 2022, 5:05 IST
ಫಾಲೋ ಮಾಡಿ
Comments

ಕಂಪಾಲಾ (ಉಗಾಂಡ): ರಾಜಧಾನಿ ಕಂಪಾಲಾ ಪ್ರದೇಶದಲ್ಲಿಎಬೋಲಾದೃಢಪಟ್ಟ 9 ಪ್ರಕರಣಗಳು ಭಾನುವಾರ ಪತ್ತೆಯಾಗಿವೆ. ಇದರೊಂದಿಗೆ ಕಳೆದೆರಡು ದಿನಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಉಗಾಂಡ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಹೊಸ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಸಚಿವೆ ಡಾ.ಜೇನ್‌ ರುತ್‌ ಎಸೆಂಗ್‌ ಒಕೆರೊ,ಎಲ್ಲರೂ ಜಾಗರೂಕರಾಗಿರೋಣ. ಸೋಂಕಿತರು ನಿಮ್ಮ ಸಂಪರ್ಕಕ್ಕೆ ಬಂದಿದ್ದರೆ ಅಥವಾ ಸಂಪರ್ಕಿತರ ಬಗ್ಗೆ ತಿಳಿಸಿದ್ದರೆ ವರದಿ ಮಾಡಿ. ಎಬೊಲಾವನ್ನು ಕೊನೆಗೊಳಿಸಲು ಸಹಕರಿಸಿ ಎಂದು ಟ್ವಿಟರ್‌ನಲ್ಲಿ ಕರೆ ನೀಡಿದ್ದಾರೆ.

ಉಗಾಂಡದಲ್ಲಿ ಎಬೋಲಾ ವೈರಾಣು ಒಂದು ತಿಂಗಳಿನಿಂದೀಚೆಗೆ ತೀವ್ರ ಸ್ವರೂಪದಲ್ಲಿ ಹಬ್ಬುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು.

2000ನೇ ಇಸವಿಯಲ್ಲಿ ಉಗಾಂಡದಲ್ಲಿ ಎಬೋಲಾ ಸೋಂಕಿಗೆ 200 ಜನರು ಅಸುನೀಗಿದ್ದರು. 2014–16ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಈ ಸೋಂಕಿಗೆ 11 ಸಾವಿರ ಜನರು ಮೃತಪಟ್ಟಿದ್ದರು.

1976ರಲ್ಲಿ ದಕ್ಷಿಣ ಸುಡಾನ್ ಮತ್ತು ಕಾಂಗೊದಲ್ಲಿ ಎರಡು ಎಬೋಲಾ ಸೋಂಕು ಪತ್ತೆಯಾಯಿತು. ಎಬೋಲಾ ನದಿಯ ಸಮೀಪದ ಹಳ್ಳಿಯಲ್ಲಿ ಇದು ಪತ್ತೆಯಾಗಿದ್ದರಿಂದ ಈ ಸೋಂಕಿಗೆ ಎಬೋಲಾ ಎಂದು ಹೆಸರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT