ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌: ಜೈಲಿನಿಂದ ಪರಾರಿಯಾಗಿದ್ದ ಶಂಕಿತ ಉಗ್ರನ ಸೆರೆ

Published 9 ಸೆಪ್ಟೆಂಬರ್ 2023, 13:48 IST
Last Updated 9 ಸೆಪ್ಟೆಂಬರ್ 2023, 13:48 IST
ಅಕ್ಷರ ಗಾತ್ರ

ಲಂಡನ್‌: ವಾಂಡ್ಸ್‌ವರ್ತ್‌ ಜೈಲಿನಿಂದ ಪರಾರಿಯಾಗಿದ್ದ ಮಾಜಿ ಯೋಧ, ಶಂಕಿತ ಉಗ್ರ ಡೇನಿಯಲ್ ಅಬೇದ್‌ ಖಲೀಫ್‌ನನ್ನು ಬ್ರಿಟನ್‌ ಪೊಲೀಸರು ಶನಿವಾರ ಬಂದಿಸಿದ್ದಾರೆ.

ಡೇನಿಯಲ್‌ನನ್ನು ಚಿಸ್ವಿಕ್ ಪ್ರದೇಶದಲ್ಲಿ ಬಂಧಿಸಿದ್ದು, ಸದ್ಯ ಪೊಲೀಸ್‌ ವಶದಲ್ಲಿದ್ದಾನೆ ಎಂದು ಅಧಿಕಾರಿಗಳು ‘ಎಕ್ಸ್’ (ಟ್ವಿಟರ್‌) ವೇದಿಕೆಯಲ್ಲಿ ಹೇಳಿದ್ದಾರೆ.

‘ಡೇನಿಯಲ್‌ನನ್ನು ಬಂಧಿಸಿರುವ ಸುದ್ದಿ ತಿಳಿದು ಸಂತಸವಾಗಿದೆ’ ಎಂದು ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂಧಿರುವ ಬ್ರಿಟನ್‌ ಪ್ರಧಾನಿ ರಿಶಿ ಸುನಕ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬ್ರಿಟನ್‌ನ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಡೇನಿಯಲ್, ಜೈಲಿಗೆ ಆಹಾರ ಸರಬರಾಜು ಮಾಡುವ ಟ್ರಕ್‌ನ ಕೆಳಭಾಗದಲ್ಲಿ ಅವಿತು ಪರಾರಿಯಾಗಿದ್ದ.

ಈತನ ಪತ್ತೆಗಾಗಿ ಪೊಲೀಸರು ಹೆಲಿಕಾಪ್ಟರ್‌ ಬಳಸಿ ಶೋಧ ಕಾರ್ಯ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT