ಕೀವ್ (ಉಕ್ರೇನ್): ಕೇಂದ್ರ ಉಕ್ರೇನ್ನ ನಗರ ಕ್ರಿವ್ಯಿ ರಿಹ್ ಮೇಲೆ ರಷ್ಯಾ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಮೃತರಲ್ಲಿ, 9 ಮಕ್ಕಳೂ ಸೇರಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಸೆರ್ಹಿಲ್ ಲಿಸಾಕ್ ಶನಿವಾರ ಹೇಳಿದ್ದಾರೆ.

ಶುಕ್ರವಾರ ನಡೆದ ದಾಳಿಯಲ್ಲಿ, ಮೂರು ತಿಂಗಳ ಮಗುವಿನಿಂದ ಹಿಡಿದು ವಯೋವೃದ್ಧರ ವರೆಗೆ ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ 17 ಮಂದಿ ಹಾಗೂ ಚಿಂತಾಜನಕ ಸ್ಥಿತಿಯಲ್ಲಿರುವ ಎರಡು ಮಕ್ಕಳು ಸೇರಿದಂತೆ 40 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

'ಬಲಿಯಾದವರ ನೆನಪು ಸದಾ ಕಾಡಲಿದೆ' ಎಂದಿರುವ ನಗರ ರಕ್ಷಣಾ ಮಂಡಳಿಯ ಮುಖ್ಯಸ್ಥ ವೊಲೆಕ್ಸಾಂಡರ್ ವಿಲ್ಕುಲ್, 'ಈ ಕೃತ್ಯಕ್ಕೆ ಕ್ಷಮೆಯೇ ಇಲ್ಲ' ಎಂದು ಕಿಡಿಕಾರಿದ್ದಾರೆ.

ದಾಳಿಗೊಳಗಾಗಿರುವ ಕ್ರಿವ್ಯಿ ರಿಹ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವೂ ಹೌದು.

'ಕ್ಷಿಪಣಿಗಳು ವಸತಿ ಕಟ್ಟಡಗಳ ಸಮೀಪದ ಮೈದಾನ ಮತ್ತು ರಸ್ತೆಗಳಿಗೆ ಅಪ್ಪಳಿಸಿವೆ' ಎಂದು ಝೆಲೆನ್ಸ್ಕಿ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ.

ಸುಮಾರು 20 ವಸತಿ ಕಟ್ಟಡಗಳು, 30ಕ್ಕೂ ಹೆಚ್ಚು ವಾಹನಗಳು, ಒಂದು ಶೈಕ್ಷಣಿಕ ಕಟ್ಟಡ ಹಾಗೂ ರೆಸ್ಟೋರೆಂಟ್ಗೆ ಹಾನಿಯಾಗಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.