ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಉಪಪ್ರಧಾನಿ ಹಾಗೂ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಸಂಸತ್ ರಾಜೀನಾಮೆ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಉಪ ಪ್ರಧಾನಿಯೊಂದಿಗೆ ಕೈಗಾರಿಕಾ ಸಚಿವ ಸೇರಿದಂತೆ ಒಟ್ಟು ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಸಂಸದರು ತಿಳಿಸಿರುವುದಾಗಿ ವರದಿಯಾಗಿದೆ.
ಸಂಸತ್ ಅಧಿವೇಶನ ಬುಧವಾರ ಕೊನೆಗೊಂಡಿದೆ. ಯುದ್ಧದಲ್ಲಿ ಅತಿ ಹೆಚ್ಚು ಜೀವ ಹಾನಿ ವಿಷಯ ವ್ಯಾಪಕವಾಗಿ ಚರ್ಚೆಗೊಂಡಿತು. ವಿದೇಶಾಂಗ ಸಚಿವರ ರಾಜೀನಾಮೆ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸಲಿಲ್ಲ ಎಂದು ಸಂಸದರು ಸಾಮಾಜಿಕ ಮಾಧ್ಯಮ ಟೆಲಿಗ್ರಾಂನಲ್ಲಿ ವಿಷಯ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.