ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌–16 ಯುದ್ಧ ವಿಮಾನಕ್ಕೆ ಒಪ್ಪಿಗೆ: ಝೆಲೆನ್‌ಸ್ಕಿ ನೆದರ್ಲೆಂಡ್ಸ್‌ಗೆ ಭೇಟಿ

Published 20 ಆಗಸ್ಟ್ 2023, 16:16 IST
Last Updated 20 ಆಗಸ್ಟ್ 2023, 16:16 IST
ಅಕ್ಷರ ಗಾತ್ರ

ಐಂಡ್‌ಹೋವನ್‌: ಉಕ್ರೇನ್‌ ವಾಯುಪಡೆಗೆ ಎಫ್‌–16 ಯುದ್ಧ ವಿಮಾನಗಳನ್ನು ಪೂರೈಸಲು ಡಚ್‌ ಮತ್ತು ಡ್ಯಾನಿಸ್‌  ಸರ್ಕಾರಗಳಿಗೆ ಅಮೆರಿಕವು ಅನುಮತಿ ನೀಡಿದ ಎರಡು ದಿನಗಳ ನಂತರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಭಾನುವಾರ ನೆದರ್ಲೆಂಡ್ಸ್‌ಗೆ ಮಹತ್ವದ ಭೇಟಿ ನೀಡಿದರು. 

ಝೆಲೆನ್‌ಸ್ಕಿ ಅವರು ಡಚ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರನ್ನು ಐಂಡ್‌ಹೋವನ್‌ ನಗರದ ವಾಯು ನೆಲೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಕ್ಕೂ ಒಂದು ದಿನ ಮೊದಲು ಝೆಲೆನ್‌ಸ್ಕಿ ಸ್ವೀಡನ್‌ಗೆ ಭೇಟಿ ಕೊಟ್ಟಿದ್ದರು.

ಅಮೆರಿಕ ನಿರ್ಮಿತ ಎಫ್‌–16 ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ನೀಡಲು ನೆದರ್ಲೆಂಡ್ಸ್‌  ಮತ್ತು ಡೆನ್ಮಾರ್ಕ್‌ ಸರ್ಕಾರಗಳಿಗೆ ಅಮೆರಿಕವು ಶುಕ್ರವಾರ ಅನುಮತಿ ನೀಡಿರುವುದಾಗಿ ಪ್ರಕಟಿಸಿತ್ತು. ಉಕ್ರೇನ್‌ ಪೈಲಟ್‌ಗಳಿಗೆ ಈ ಅತ್ಯಾಧುನಿಕ ಯುದ್ಧ ವಿಮಾನಗಳ ಹಾರಾಟ ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿರುವ ಕೂಟದಲ್ಲಿ ಡಚ್ ಮತ್ತು ಡ್ಯಾನಿಶ್ ಸರ್ಕಾರಗಳು ಸಹ ಭಾಗಿಯಾಗಿವೆ.

ದೇಶದ ವಾಯು ರಕ್ಷಣೆಗಾಗಿ ಝೆಲೆನ್‌ಸ್ಕಿ ಅವರು ಎಫ್‌–16 ಯುದ್ಧ ವಿಮಾನಗಳನ್ನು ಒದಗಿಸುವಂತೆ ಯುದ್ಧದ ಆರಂಭದಿಂದಲೂ ಅಮೆರಿಕ ನೇತೃತ್ವದ ಪಶ್ಚಿಮ ರಾಷ್ಟ್ರಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು.

ಅಮೆರಿಕದ ಈ ನಿರ್ಧಾರವು, ರಷ್ಯಾದ ಆಕ್ರಮಣ ಹಿಮ್ಮೆಟ್ಟಿಸಲು ಪ್ರತಿದಾಳಿಗೆ ಇಳಿದಿರುವ ಉಕ್ರೇನ್‌ ವಾಯುಪಡೆಗೆ ಪ್ರಮುಖ ಉತ್ತೇಜನವಾಗಿ ಕಾಣಿಸುತ್ತಿದೆ. ಆದರೂ, 18 ತಿಂಗಳಿನಿಂದ ನಡೆಯುತ್ತಿರುವ ಯುದ್ಧದ ಮೇಲೆ ಈ ಯುದ್ಧ ವಿಮಾನಗಳು ಯಾವುದೇ ಪರಿಣಾಮ ಬೀರಲಾರವು ಎಂದೇ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT