ಕೀವ್ (ಉಕ್ರೇನ್) : ಉಕ್ರೇನ್ ಸರ್ಕಾರದ ನಿಯೋಗವು ಅಮೆರಿಕದ ಪ್ರಮುಖ ಶಸ್ತ್ರಾಸ್ತ್ರ ತಯಾರಕರನ್ನು ಭೇಟಿಯಾಗಿದೆ ಎಂದು ದೇಶದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಈ ವಾರಾಂತ್ಯದಲ್ಲಿ ಭೇಟಿಯಾಗಲಿದ್ದು, ಅದಕ್ಕೂ ಮುಂಚೆ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ.

ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆ್ಯಂಡ್ರಿ ಎರ್ಮಕ್ ಮತ್ತು ಪ್ರಧಾನಿ ಯುನಿಯಾ ಸ್ಟೈರಿಡೆಂಕೊ ನೇತೃತ್ವದ ನಿಯೋಗವು ಲಾಕ್ಹೀಡ್ ಮಾರ್ಟಿನ್ ಮತ್ತು ರೇಥಿಯಾನ್ ಪ್ರತಿನಿಧಿಗಳನ್ನು ಭೇಟಿಯಾಯಿತು ಎಂದು ಯೆರ್ಮಕ್ ಟೆಲಿಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಮಾತುಕತೆಯಲ್ಲಿ ಏನು ಚರ್ಚಿಸಲಾಯಿತು ಎಂಬುವುದನ್ನು ಎರ್ಮಕ್ ಬಹಿರಂಗಪಡಿಸಲಿಲ್ಲ.

ರಷ್ಯಾದ ದೂರಗಾಮಿ ದಾಳಿಗಳನ್ನು ಎದುರಿಸಲು ಉಕ್ರೇನ್ಗೆ ಪೇಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆಗಳು ಮತ್ತು ಟೊಮಹಾಕ್ ಕ್ರೂಸ್ ಕ್ಷಿಪಣಿಗಳು ನೆರವಾಗಲಿದೆ. ಇದನ್ನು ರೇಥಿಯಾನ್ ಉತ್ಪಾದಿಸುತ್ತದೆ. ಲಾಕ್ಹೀಡ್ ಮಾರ್ಟಿನ್ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಶ್ರೇಣಿಯನ್ನು ತಯಾರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.