ವಿಶ್ವಸಂಸ್ಥೆ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್ಟಿಎ) ಉಲ್ಲೇಖಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಬಹು ಧ್ರುವೀಕರಣವನ್ನು ಬೆಂಬಲಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಯಾವುದೋ ಒಂದು ಶಕ್ತಿಯಿಂದ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಮತ್ತು ಚೀನಾವನ್ನು ಉಲ್ಲೇಖಿಸಿ ಹೇಳಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕವು ವಿಶ್ವದ ಶಕ್ತಿಶಾಲಿ ರಾಷ್ಟ್ರ ಎಂಬುದು ಸ್ಪಷ್ಟವಾಗಿದೆ. ವಿಶ್ವವು ಎರಡು ಧ್ರುವಗಳಾಗಿ ವಿಂಗಡಣೆಯಾಗಿದೆ. ಒಂದು ಬದಿಯಲ್ಲಿ ಚೀನಾ ಹಾಗೂ ಇನ್ನೊಂದು ಬದಿಯಲ್ಲಿ ಅಮೆರಿಕ ದೇಶಗಳು ಶಕ್ತಿಕೇಂದ್ರಗಳಾಗಿವೆ’ ಎಂದು ಹೇಳಿದರು.

‘ಭಾರತ ಮತ್ತು ಇ.ಯು ಬೃಹತ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಶಾಂತಿ, ಅಭಿವೃದ್ಧಿ, ಮೌಲ್ಯಗಳು ಹಾಗೂ ಸ್ಥಿರತೆ ಇರುವ ವಿಶ್ವ ಬೇಕಾದರೆ ನಾವು ಬಹುಧ್ರುವೀಕರಣವನ್ನು ಬೆಂಬಲಿಸಬೇಕು. ವಿವಿಧ ದೇಶಗಳ ನಡುವಿನ ಬಲವಾದ ಸಂಬಂಧವನ್ನು ಉತ್ತೇಜಿಸಬೇಕಾಗಿದೆ. ಇತ್ತೀಚೆಗೆ ನಡೆದ ಇ.ಯು–ಮರ್ಕೊಸುರ್ (ದಕ್ಷಿಣ ಅಮೆರಿಕದ ಒಕ್ಕೂಟ), ಇ.ಯು– ಇಂಡೊನೇಷ್ಯಾ ಹಾಗೂ ಇ.ಯು–ಭಾರತ ನಡುವಿನ ಸಂಬಂಧದಲ್ಲಿ ಉತ್ತಮ ನಿರೀಕ್ಷೆಯನ್ನು ಹೊಂದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.