ವಿಶ್ವಸಂಸ್ಥೆ: ಅಫ್ಗಾನಿಸ್ತಾನದ 40 ಲಕ್ಷ ಜನರು ‘ಆಹಾರದ ತುರ್ತು ಪರಿಸ್ಥಿತಿ’ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಗ್ರಾಮೀಣ ಭಾಗದಲ್ಲಿನ ಬಹುಪಾಲು ಜನರಿಗೆ ಚಳಿಗಾಲದ ಗೋಧಿ ನಾಟಿ ಮಾಡಲು, ಜಾನುವಾರುಗಳಿಗೆ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಕಟುಂಬಗಳು, ವೃದ್ಧರು, ಅಂಗವಿಕಲರು ಮತ್ತು ದುರ್ಗಲರಿಗೆ ಆರ್ಥಿಕ ನೆರವಿನ ತುರ್ತು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಫ್ಗನ್‌ನ ಶೇ 70ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಕೃಷಿಯನ್ನೇ ಅವಲಂಬಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ತುರ್ತು ಪರಿಸ್ಥಿತಿ ಮತ್ತು ಪುನಶ್ಚೇತನ ಕಚೇರಿಯ ನಿರ್ದೇಶಕ ರೆನ್ ಪಾಲ್ಸನ್ ಮಾಹಿತಿ ನೀಡಿದ್ದಾರೆ.

ದೇಶದ ಕೃಷಿಯು ಅಫ್ಗನ್ ಜಿಡಿಪಿಗೆ ಶೇ 25ರಷ್ಟು ಕೊಡುಗೆ ನೀಡುತ್ತಿದ್ದು ಶೇ 45ರಷ್ಟು ಜನರಿಗೆ ನೇರ ಉದ್ಯೋಗ ಒದಗಿಸಿದೆ. ದೇಶದ ಶೇ 80ರಷ್ಟು ಜನರು ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೇಶದ 34 ಪ್ರಾಂತ್ಯಗಳ ಪೈಕಿ 25ರಲ್ಲಿ ತೀವ್ರ ಬರಗಾಲವಿದ್ದು, 73 ಲಕ್ಷ ಜನರು ಬಾಧಿತರಾಗಿದ್ದಾರೆ. ಆಹಾರ ಸೇವನೆ ನಡುವಿನ ಅಂತರ, ಅತಿಯಾದ ಅಪೌಷ್ಟಿಕತೆ ಹಾಗೂ ಅಧಿಕ ಸಾವಿನ ಪ್ರಮಾಣದಿಂದ 40 ಲಕ್ಷ ಜನರು ಮಾನವೀಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ... Engineers Day | ಎಂಜಿನಿಯರ್ಗಳಿಗೆ ಅಭಿನಂದಿಸಲು ಶಬ್ದಗಳೇ ಸಾಲುತ್ತಿಲ್ಲ: ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.