ವಿಶ್ವಸಂಸ್ಥೆ: ಗೋಲಾನ್ ಹೈಟ್ಸ್ನಲ್ಲಿ ಮೃತರಾದ ಭಾರತದ ಬ್ರಿಗೇಡಿಯರ್ ಜನರಲ್ ಅಮಿತಾಭ್ ಝಾ ಅವರಿಗೆ ವಿಶ್ವಸಂಸ್ಥೆಯು ಗೌರವ ನಮನ ಸಲ್ಲಿಸಿದೆ.

‘ಶಾಂತಿಪಾಲನೆಯ ಕರ್ತವ್ಯದಲ್ಲಿ ತೋರಿದ ಬದ್ಧತೆ ಮತ್ತು ನಾಯಕತ್ವಕ್ಕಾಗಿ ಝಾ ಅವರನ್ನು ಸದಾ ನೆನಪಿಸಿಕೊಳ್ಳಲಾಗುವುದು’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಯುಎನ್ಡಿಒಎಫ್ನ ಉಪ ಕಮಾಂಡರ್ ಆಗಿ 2023ರ ಏಪ್ರಿಲ್ನಿಂದ ಬ್ರಿಗೇಡಿಯರ್ ಅಮಿತಾಬ್ ಝಾ ಸೇವೆ ಸಲ್ಲಿಸುತ್ತಿದ್ದರು.

ವೈದ್ಯಕೀಯ ಕಾರಣಗಳಿಂದಾಗಿ ಅಕಾಲಿಕ ನಿಧನ ಹೊಂದಿದ ಬ್ರಿಗೇಡಿಯರ್ಗೆ ಭಾರತೀಯ ಸೇನೆಯು ಸಹ ‘ಎಕ್ಸ್’ನಲ್ಲಿ ಗೌರವ ನಮನ ಸಮರ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.