ಸನಾ: ಹುತಿ ಬಂಡುಕೋರರನ್ನು ಗುರಿಯಾಗಿಸಿ ಯೆಮೆನ್ನ ಪ್ರಮುಖ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ತೈಲ ಸಂಗ್ರಹಾಗಾರ ಘಟಕ ಹುತಿ ಬಂಡುಕೋರರ ನಿಯಂತ್ರಣದಲ್ಲಿತ್ತು ಎಂದು ಅಮೆರಿಕ ಹೇಳಿಕೊಂಡಿದೆ.

ಇರಾನ್ ಬೆಂಬಲಿತ ಹುತಿಗೆ ಸಿಗುವ ಆರ್ಥಿಕ ಬೆಂಬಲವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರಾಸ್ ಇಸ್ಸಾ ತೈಲ ಘಟಕದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಕ ಸೇನೆ ತಿಳಿಸಿದೆ.

ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಸುಮಾರು 50 ಕಾರ್ಮಿಕರು ಗಾಯಗೊಂಡಿದ್ದಾರೆ ಹುತಿ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.

ಈ ತೈಲ ಘಟಕವು ಯೆಮೆನ್ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದ ದಂಡೆಯಲ್ಲಿದೆ.
.ಹುತಿ ಬಂಡುಕೋರರ ಭದ್ರನೆಲೆ ಮೇಲೆ ಅಮೆರಿಕ ದಾಳಿ: ಇಬ್ಬರು ಸಾವು .ಯೆಮೆನ್ ಬಳಿ ಮುಳುಗಿದ 4 ದೋಣಿ: ಇಬ್ಬರು ಸಾವು, 186 ನಾಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.