ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ಗೆ ಫೈಟರ್ ಜೆಟ್ ಸೇರಿದಂತೆ ಶಸ್ತ್ರಾಸ್ತ್ರಗಳ ಮಾರಾಟ; ಯುಎಸ್ ಅನುಮೋದನೆ

Published : 14 ಆಗಸ್ಟ್ 2024, 4:56 IST
Last Updated : 14 ಆಗಸ್ಟ್ 2024, 4:56 IST
ಫಾಲೋ ಮಾಡಿ
Comments

ವಾಷಿಂಗ್ಟನ್‌: ಯುದ್ಧ ವಿಮಾನಗಳು ಸೇರಿದಂತೆ ಬರೋಬ್ಬರಿ 20 ಬಿಲಿಯನ್‌ ಡಾಲರ್‌ (ಅಂದಾಜು ₹ 1.67 ಲಕ್ಷ ಕೋಟಿ) ಮೊತ್ತದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ಗೆ ಮಾರಾಟ ಮಾಡಲು ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅನುಮೋದಿಸಿದ್ದಾರೆ. ಯುಎಸ್‌ ಸೇನೆಯ ಪ್ರಧಾನ ಕಚೇರಿ ಪೆಂಟಗನ್‌ ಈ ಮಾಹಿತಿ ನೀಡಿದೆ.

ಹೇಳಿಕೆ ಬಿಡುಗಡೆ ಮಾಡಿರುವ ಪೆಂಟಗನ್‌, F–15 ಜೆಟ್‌ಗಳು, ಯುದ್ಧ ಟ್ಯಾಂಕರ್‌ಗಳು, ಸೇನಾ ವಾಹನಗಳು ಸೇರಿದಂತೆ 20 ಬಿಲಿಯನ್‌ ಡಾಲರ್‌ ಮೊತ್ತದ ಶಸ್ತ್ರಾಸ್ತ್ರಗಳ ಸಂಭಾವ್ಯ ಮಾರಾಟಕ್ಕೆ ಬ್ಲಿಂಕನ್‌ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದೆ.

ಯುದ್ಧ ಟ್ಯಾಂಕರ್‌ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಬೋಯಿಂಗ್‌ Co F-15 ಫೈಟರ್‌ ಜೆಟ್‌ಗಳನ್ನು ತಯಾರಿಸಲು ಹಾಗೂ ರವಾನಿಸಲು ವರ್ಷಗಳು ಬೇಕಾಗುತ್ತವೆ ಎಂದೂ ಹೇಳಿದೆ.

ಹಮಾಸ್‌ ಬಂಡುಕೋರರು ಕಳೆದ ವರ್ಷ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿ ಮೇಲೆ ಯುದ್ಧ ನಡೆಸುತ್ತಿರುವ ಇಸ್ರೇಲ್‌ಗೆ ಯುಎಸ್‌ ದೃಢವಾದ ಬೆಂಬಲ ಸೂಚಿಸಿದೆ.

ಹಮಾಸ್‌ ಪರಮೋಚ್ಛ ನಾಯಕ ಇಸ್ಮಾಯಿಲ್‌ ಹನಿಯೆ ಅವರನ್ನು ಇರಾನ್‌ನಲ್ಲಿ ಹಾಗೂ ಹಿಬ್ಜುಲ್ಲಾ ಸೇನಾ ಕಮಾಂಡರ್‌ ಫ್ಯುಯದ್ ಶುಕರ್ ಅವರನ್ನು ಬೈರೂತ್‌ನಲ್ಲಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಈ ಕೃತ್ಯಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂದು ಕಿಡಿಕಾರಿರುವ ಇರಾನ್‌, ಬೈರೂತ್‌ ಪ್ರತಿಕಾರದ ಬೆದರಿಕೆಯೊಡ್ಡಿವೆ. ಈ ಬೆಳವಣಿಗೆ ನಡುವೆಯೇ, ಯುಎಸ್‌ ಶಸ್ತ್ರಾಸ್ತ್ರ ಮಾರಾಟಕ್ಕೆ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT