ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ: ಅಧ್ಯಕ್ಷರ ಪದಚ್ಯುತಿಗೆ ಸಜ್ಜಾದ ಸಂಸತ್

Last Updated 13 ಜನವರಿ 2021, 1:40 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡ ಬಳಿಕ ವಿವಿಧ ರೀತಿಯ ವಿವಾದಕ್ಕೆ ತುತ್ತಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಲು ಅಲ್ಲಿನ ಸಂಸತ್ ಸಜ್ಜಾಗಿದೆ. ಅಲ್ಲದೆ, ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ಕೂಡ ಸಿದ್ಧತೆ ನಡೆದಿದೆ. ಅಧಿಕೃತವಾಗಿ ಹುದ್ದೆ ತೊರೆದು ಹೋಗಲು ಡೊನಾಲ್ಡ್ ಟ್ರಂಪ್‌ಗೆ ಒಂದು ಕೊನೆಯ ಅವಕಾಶವನ್ನು ಡೆಮೋಕ್ರಾಟ್ಸ್ ನೀಡಲಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಅವಧಿ ಕೊನೆಯಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಯಾವಾಗ ಹುದ್ದೆ ಬಿಟ್ಟು ನಿರ್ಗಮಿಸುವರು ಎನ್ನುವುದು ಇನ್ನೂ ಖಚಿತವಾಗಿಲ್ಲ.

ಟ್ರಂಪ್ ವಿರುದ್ಧ ಕ್ರಮಕ್ಕೆ ಮುಂದಾದ ಸಂಸತ್

ಅಮೆರಿಕ-ಮೆಕ್ಸಿಕೋ ಗಡಿಗೆ ವಿಹಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ದೋಷಾರೋಪಣೆ ಕ್ರಮ ಸರಿಯಲ್ಲ, ಅದರಿಂದ ತಮಗೆ ಅತೀವ ಕೋಪ ಬಂದಿದೆ ಎಂದಿದ್ದಾರೆ. ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಟ್ರಂಪ್ ಟ‌್ವಿಟರ್ ಖಾತೆ ಕೂಡ ಸ್ಥಗಿತವಾಗಿದ್ದು, ಅಧಿಕೃತ ಹೇಳಿಕೆ ನೀಡಲು ಸಾಧ್ಯವಾಗುತ್ತಿಲ್ಲ.

ವಿಶೇಷಾಧಿಕಾರ ಬಳಸಲು ಅವಕಾಶ

ಅಧ್ಯಕ್ಷೀಯ ಅವಧಿ ಮುಗಿಯುತ್ತಿದ್ದರೂ, ನಿಯಮದಂತೆ ಹುದ್ದೆ ತೊರೆಯಲು ಮುಂದಾಗದಿರುವ ಟ್ರಂಪ್ ವಿರುದ್ದ ದೋಷಾರೋಪ ಸಲ್ಲಿಸಲು ಸಂಸತ್ ಮುಂದಾಗಿದೆ. ಅದರ ಜತೆಗೇ 25ನೇ ತಿದ್ದುಪಡಿಯ ವಿಶೇಷ ಅಧಿಕಾರ ಬಳಸಿಕೊಂಡು, ಟ್ರಂಪ್ ವಿರುದ್ಧ ಕ್ರಮಕ್ಕೆ ಸಂಸತ್ ಮುಂದಾಗಿದೆ. ಈ ಅಧಿಕಾರವನ್ನು ಈ ಮೊದಲು ಯಾರ ವಿರುದ್ಧವೂ ಬಳಸಲಾಗಿಲ್ಲ. ಅಧ್ಯಕ್ಷೀಯ ಅವಧಿ ಮುಗಿದ ಬಳಿಕವೂ, ಹುದ್ದೆ ತೊರೆಯದಿದ್ದರೆ, ಈ ತಿದ್ದುಪಡಿ ಬಳಸಿಕೊಂಡು ಸಂಸತ್ ಕ್ರಮ ಕೈಗೊಳ್ಳುತ್ತದೆ.

ಟ್ರಂಪ್ ಮುಖಭಂಗ

ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಹಿಂಸಾಚಾರ, ಐವರ ಸಾವು ಪ್ರಕರಣ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರ ಕೃತ್ಯ ಇದಾಗಿರುವುದರಿಂದ, ಟ್ರಂಪ್ ಅಮೆರಿಕ ಸಂಸತ್‌ನಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಜತೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಜತೆಗೂ ಟ್ರಂಪ್ ಮಾತುಬಿಟ್ಟಿದ್ದು, ಘಟನೆ ಬಳಿಕ ಅವರಿಬ್ಬರು ಪರಸ್ಪರ ಭೇಟಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT