ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ: ಕಪ್ಪು ಕಾರಿನಲ್ಲಿ ಪರಾರಿಯಾಗಿದ್ದವ ಬಂಧನ

Published : 16 ಸೆಪ್ಟೆಂಬರ್ 2024, 6:36 IST
Last Updated : 16 ಸೆಪ್ಟೆಂಬರ್ 2024, 6:36 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಭಾನುವಾರ ಗುಂಡಿನ ದಾಳಿ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು ಆತನನ್ನು ಎಫ್‌ಬಿಐ ಬಂಧಿಸಿದೆ.

ಬಂಧಿತನನ್ನು ಪ್ಲೋರಿಡಾದ 58 ವರ್ಷದ ರಿಯಾನ್ ರುತ್ (Ryan Wesley Routh) ಎಂದು ಗುರುತಿಸಲಾಗಿದೆ. ಗಾಲ್ಪ್ ಕೋರ್ಸ್‌ನಲ್ಲಿ ಟ್ರಂಪ್‌ ಅವರು ಗಾಲ್ಪ್ ಆಡುತ್ತಿದ್ದಾಗ ರಿಯಾನ್ ರುತ್ ಎ.ಕೆ 47 ಮೂಲಕ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ. ಆದರೆ, ಗುಂಡು ಟ್ರಂಪ್ ಅವರಿಗೆ ತಗುಲಿರಲಿಲ್ಲ.

ಗುಂಡು ಹಾರಿಸಿದ್ದ ರಿಯಾನ್ ರುತ್ ಸ್ಥಳದಿಂದ ಕಪ್ಪು ಬಣ್ಣದ ಕಾರಿನಲ್ಲಿ ನಾಪತ್ತೆಯಾಗಿದ್ದ. ಕೂಡಲೇ ಜಾಗೃತರಾಗಿದ್ದ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಿಯಾನ್ ರುತ್ ರಷ್ಯಾದ ಮೇಲೆ ಕೋಪ ಹೊಂದಿದ್ದಾನೆ ಎನ್ನಲಾಗಿದ್ದು ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸಲು ಟ್ರಂಪ್ ಏನೂ ಮಾಡಲಿಲ್ಲ ಎಂದು ಅವರ ಮೇಲೆ ದಾಳಿಗೆ ಮುಂದಾಗಿದ್ದ ಎಂದು ವರದಿಗಳು ಹೇಳಿವೆ.

ಸೇನಾ ಹಿನ್ನೆಲೆಯನ್ನು ಹೊಂದಿರದ ರಿಯಾನ್ ಉಕ್ರೇನ್‌ಗೆ ಹೋಗಿ ಕೆಲ ಅಪ್ಘಾನಿಸ್ತಾನ ಯುವಕರನ್ನು ಉಕ್ರೇನ್‌ಗೆ ಕರೆಯಿಸಿ ರಷ್ಯಾ ವಿರುದ್ಧ ಹೋರಾಡಲು ಅಣಿಗೊಳಿಸಿದ್ದ.

‌ಟ್ರಂಪ್ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ಅವರಿಗೆ ಗುಂಡು ತಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ಟ್ರಂಪ್ ಪ್ರಚಾರದ ವಕ್ತಾರ ಸ್ಟೀವನ್ ಚೆಯುಂಗ್ ತಿಳಿಸಿದ್ದಾರೆ.

‘ನನ್ನ ಸಮೀಪದಲ್ಲಿ ಗುಂಡಿನ ದಾಳಿ ನಡೆದಿವೆ. ನಾನು ಸುರಕ್ಷಿತ ಮತ್ತು ಆರೋಗ್ಯವಾಗಿದ್ದೇನೆ. ಯಾವುದೂ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾನು ಎಂದಿಗೂ ಶರಣಾಗುವುದಿಲ್ಲ' ಎಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಸಂದೇಶ ಕಳುಹಿಸಿದ್ದಾರೆ.

ಜುಲೈ 13ರಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್‌ ಟ್ರಂಪ್ ಪರ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಟ್ರಂಪ್ ಬಲ ಕಿವಿಗೆ ಗುಂಡು ತಗುಲಿತ್ತಾದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT