ಟೊಕಿಯೊ: ಯುಎಸ್ ಸೇನಾ ಹೆಲಿಕಾಪ್ಟರ್ ಟೊಕಿಯೊದ ನೈರುತ್ಯಕ್ಕಿರುವ ಕನಗವಾ ಪ್ರಾಂತ್ಯದ ಭತ್ತದ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿರುವುದಾಗಿ ಜಪಾನ್‌ನ ರಾಷ್ಟ್ರೀಯ ಸುದ್ದಿ ಪ್ರಸಾರಕ ಸಂಸ್ಥೆ 'ಎನ್‌ಎಚ್‌ಕೆ' ವರದಿಯಲ್ಲಿ ಉಲ್ಲೇಖಿಸಿದೆ.
ಹೆಲಿಕಾಪ್ಟರ್ ತುರ್ತಾಗಿ ಇಳಿಯಲು ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.