ವಾಷಿಂಗ್ಟನ್: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಆಂಥ್ರೋಪಿಕ್ನ ‘ಕ್ಲಾಡ್’ ಎ.ಐ ಬಳಕೆ ಮಾಡಿತ್ತು ಎಂದು ರಾಯಿಟರ್ಸ್, ದಿ ಗಾರ್ಡಿಯನ್ ಸಹಿತ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.
.ಇರಾನ್ ಹಾರಿಸಿದ 137 ಕ್ಷಿಪಣಿ, 209 ಡ್ರೋಣ್ಗಳನ್ನು ಹೊಡೆದುರುಳಿಸಿದ್ದೇವೆ: ಯುಎಇ.
ಆಂಥ್ರೋಪಿಕ್ನ ಜೊತೆ ಮಾಡಿಕೊಂಡಿದ್ದ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಕೆಲವೇ ಗಂಟೆಗಳಲ್ಲಿ ದಾಳಿಗೆ ಕ್ಲಾಡ್ ಬಳಸಿಕೊಳ್ಳಲಾಗಿದೆ.

ಗುಪ್ತಚರ, ಗುರಿ ಆಯ್ಕೆ ಹಾಗೂ ಯುದ್ಧಭೂಮಿಯ ಅಣುಕು ಪ್ರದರ್ಶನಕ್ಕೆ ಅಮೆರಿಕ ಸೇನೆ ‘ಕ್ಲಾಡ್’ ಅನ್ನು ಬಳಸಿಕೊಂಡಿದೆ ‘ವಾಲ್ ಸ್ಟ್ರೀಟ್ ಜರ್ನಲ್’ ಉಲ್ಲೇಖಿಸಿ ಗಾರ್ಡಿಯನ್ ವರದಿ ಮಾಡಿದೆ.

ಇರಾನ್ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಆಂಥ್ರೋಪಿಕ್ ಅನ್ನು ‘ಮೂಲಭೂತವಾದಿ ಎಡಪಂಥೀಯ ಕಂಪನಿ’ ಎಂದು ಡೊನಾಲ್ಡ್ ಟ್ರಂಪ್ ಟೀಕಿಸಿದ್ದರು. ಅಲ್ಲದೆ ಕ್ಲಾಡ್ ಬಳಕೆಯನ್ನು ನಿಲ್ಲಿಸಬೇಕು ಎಂದು ಎಲ್ಲಾ ಫೆಡರಲ್ ಸಂಸ್ಥೆಗಳಿಗೆ ಸೂಚಿಸಿದ್ದರು.
.ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದು ಕಾನೂನುಬದ್ಧ ಕರ್ತವ್ಯ: ಇರಾನ್ ಅಧ್ಯಕ್ಷ.
ಜನವರಿಯಲ್ಲಿ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸುವ ಕಾರ್ಯಾಚರಣೆಯಲ್ಲೂ ಅಮೆರಿಕ ಸೇನೆ ಕ್ಲಾಡ್ ಅನ್ನು ಬಳಕೆ ಮಾಡಲಾಗಿತ್ತು. ಇದಕ್ಕೆ ಆಂಥ್ರೋಪಿಕ್ ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂಸಾತ್ಮಕ ಕೃತ್ಯಗಳಿಗೆ, ಆಯುಧಗಳ ಅಭಿವೃದ್ಧಿ ಅಥವಾ ನಿಗಾವಹಿಸಲು ನಮ್ಮ ಟೂಲ್ ಬಳಸಬಾರದು ಎಂದು ಆಂಥ್ರೋಪಿಕ್ ಹೇಳಿತ್ತು.

(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಇಸ್ರೇಲ್–ಇರಾನ್ ವಾರ್: ದುಬೈನಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.