ಇಸ್ಲಾಮಾಬಾದ್: ‘ನಮ್ಮೊಂದಿಗೆ ಈ ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ಎರಡೂ ರಾಷ್ಟ್ರಗಳ ನಡುವಿನ ಸಹಕಾರವನ್ನು ವಿಸ್ತರಿಸುತ್ತದೆ ಎಂಬ ಆಶಯವಿದೆ’ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಬುಧವಾರ, ದಕ್ಷಿಣ ಏಷ್ಯಾ ರಾಷ್ಟ್ರದ ‘ಬೃಹತ್ ತೈಲ ನಿಕ್ಷೇಪಗಳನ್ನು‘ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜತೆಗೂಡಿ ಕೆಲಸ ಮಾಡಲು ಅಮೆರಿಕ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಷರೀಫ್, ‘ಅಮೆರಿಕ –ಪಾಕಿಸ್ತಾನ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದವು ನಿನ್ನೆ ರಾತ್ರಿ (ಬುಧವಾರ) ಏರ್ಪಟ್ಟಿದೆ. ಇದಕ್ಕೆ ನೇತೃತ್ವವಹಿಸಿದ ಟ್ರಂಪ್ ಅವರಿಗೆ ಧನ್ಯವಾದಗಳು. ಈ ಮಹತ್ವದ ಒಪ್ಪಂದವು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಸಹಕಾರವನ್ನು ಹೆಚ್ಚಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಶಾಶ್ವತ ಪಾಲುದಾರಿಕೆಯ ಗಡಿಗಳನ್ನು ವಿಸ್ತರಿಸಲಿದೆ’ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನದ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಮತ್ತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಯಭಾರಿ ಜೇಮೀಸನ್ ಗ್ರೀರ್ ವಾಷಿಂಗ್ಟನ್ನಲ್ಲಿ ನಡೆಸಿದ ಸಭೆಯಲ್ಲಿ ಈ ಒಪ್ಪಂದ ನಡೆದಿರುವುದಾಗಿ ಪಾಕಿಸ್ತಾನದ ಸರ್ಕಾರಿ ರೇಡಿಯೊ ಮಾಧ್ಯಮ ತಿಳಿಸಿದೆ.

ತನ್ನ ಕರಾವಳಿಯಲ್ಲಿ ದೊಡ್ಡ ತೈಲ ನಿಕ್ಷೇಪಗಳವೆ ಎಂದು ಬಹಳ ಹಿಂದಿನಿಂದಲೂ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ, ಆದರೆ ಆ ನಿಕ್ಷೇಪಗಳನ್ನು ಬಳಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಬದಲಾಗಿ ಪ್ರಸ್ತುತ ತನ್ನ ಇಂಧನ ಬೇಡಿಕೆಗಳನ್ನು ಪೂರೈಸಲು ಮಧ್ಯಪ್ರಾಚ್ಯದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ಒಪ್ಪಂದದ ಕುರಿತು ಟ್ರಂಪ್ ಕೂಡ ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡು, ‘ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಲಿವೆ. ಈ ಪಾಲುದಾರಿಕೆಯನ್ನು ಮುನ್ನಡೆಸುವ ತೈಲ ಕಂಪನಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಯಾರಿಗೆ ಗೊತ್ತು... ಭವಿಷ್ಯದಲ್ಲಿ ಪಾಕಿಸ್ತಾನದವರು ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು!’ ಎಂದು ಬರೆದುಕೊಂಡಿದ್ದಾರೆ.
.ಭವಿಷ್ಯದಲ್ಲಿ ಪಾಕ್ನವರು ಭಾರತಕ್ಕೆ ತೈಲ ಮಾರಾಟ ಮಾಡಬಹುದು: ಡೊನಾಲ್ಡ್ ಟ್ರಂಪ್.India-US Trade Deal | ಅಮೆರಿಕದಿಂದ ಭಾರತದ ಮೇಲೆ ಸುಂಕ, ದಂಡ ಪ್ರಹಾರ.ಭಾರತದ ವಿರುದ್ಧ ಟ್ರಂಪ್ ದಿಢೀರ್ ಸುಂಕ ಘೋಷಿಸಿದ್ದೇಕೆ?:US ಅಧಿಕಾರಿ ಹೇಳಿದ್ದಿಷ್ಟು.ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ, ಆಗಸ್ಟ್ 1ರಿಂದಲೇ ಜಾರಿ: ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.