ಫೋಸ್ಟರ್ ಸಿಟಿ: ‘ಆಸ್ಪತ್ರೆಗೆ ದಾಖಲಾದ ಎಲ್ಲಾ ಕೋವಿಡ್–19 ರೋಗಿಗಳಿಗೆ ‘ರೆಮ್‌ಡೆಸಿವಿರ್’ ಔಷಧ ನೀಡಲು ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ’ ಎಂದು ಫಾರ್ಮಾ ಕಂಪನಿ ಗಿಲೀಡ್ ಸೈನ್ಸಸ್, ಶುಕ್ರವಾರ ತಿಳಿಸಿದೆ.

ವೈರಾಣು ನಿರೋಧಕ ‘ರೆಮ್‌ಡೆಸಿವಿರ್’ ಔಷಧವನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲು ಈ ಮೊದಲು ಅನುಮತಿ ನೀಡಲಾಗಿತ್ತು.

ರೆಮ್‌ಡೆಸಿವಿರ್ ಔಷಧಕ್ಕೆ ಅನುಮೋದನೆ ನೀಡುವಂತೆ ಗಿಲೀಡ್ ಸಂಸ್ಥೆಯು ಆಗಸ್ಟ್ 10ರಂದು ಆಹಾರ ಮತ್ತು ಔಷಧ ಮಂಡಳಿಗೆ (ಎಫ್‌ಡಿಎ) ಅರ್ಜಿ ಸಲ್ಲಿಸಿತ್ತು. ವೆಂಕ್ಲುರಿ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಔಷಧ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿತ್ತು.

‘ರೆಮ್‌ಡೆಸಿವಿರ್’ ಔಷಧ ನೀಡಿದ ಶೇಕಡ 65ರಷ್ಟು ರೋಗಿಗಳುಆಸ್ಪತ್ರೆಗೆ ದಾಖಲಾದ ಇತರ ಕೋವಿಡ್–19 ರೋಗಿಗಳಿಗಿಂತಲೂ ಬೇಗನೆ ಗುಣಮುಖರಾಗಿರುವುದು ಗಿಲೀಡ್ ಕಂಪನಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.