ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಇಲಾಖೆಯ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆಡಳಿತ ಸುಧಾರಣೆ ಭಾಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕ್ರಮವು ಅಮೆರಿಕದ ಜಾಗತಿಕ ನಾಯಕತ್ವಕ್ಕೆ ಹಾನಿ ಉಂಟುಮಾಡಲಿದೆ ಎಂದು ಟ್ರಂಪ್ ವಿರೋಧಿಗಳು ಟೀಕಿಸಿದ್ದಾರೆ.

1,107 ನಾಗರಿಕ ಸೇವಾ ಸಿಬ್ಬಂದಿ ಹಾಗೂ 246 ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ, ಅವರನ್ನು ವಜಾಗೊಳಿಸಿರುವ ಕುರಿತ ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಕರರು ಈಗ ಹೊಂದಿದ್ದ ಹುದ್ದೆಗಳನ್ನು ರದ್ದುಗೊಳಿಸಲಾಗಿದ್ದು, ವಾಷಿಂಗ್ಟನ್ನಲ್ಲಿರುವ ವಿದೇಶಾಂಗ ಇಲಾಖೆ ಕಚೇರಿಯ ಇ–ಮೇಲ್, ಡ್ರೈವ್ಗಳೊಂದಿಗೆ ಸಂಜೆ 5ರ ಹೊತ್ತಿಗೆ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಅವರಿಗೆ ಕಳುಹಿಸಿದ ನೋಟಿಸ್ನಲ್ಲಿ ತಿಳಿಸಲಾಗಿದೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಪ್ರತಿಭಟನೆ: ತಮ್ಮ ವಸ್ತುಗಳ ಜೊತೆಗೆ ಡಜನ್ಗೂ ಅಧಿಕ ಮಾಜಿ ಸಹೋದ್ಯೋಗಿಗಳು, ರಾಯಭಾರಿಗಳು, ಕಾಂಗ್ರೆಸ್ನ ಸದಸ್ಯರ ಜೊತೆಗೆ ಇಲಾಖೆಯ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

‘ಅಮೆರಿಕ ರಾಜತಾಂತ್ರಿಕರಿಗೆ ಧನ್ಯವಾದ, ‘ನಾವೆಲ್ಲರೂ ಉತ್ತಮ ಅರ್ಹತೆ ಪಡೆಯುತ್ತೇವೆ’ ಎಂದು ಭಿತ್ತಿಪತ್ರ ಹಿಡಿದು ಅಸಮಾಧಾನ ವ್ಯಕ್ತಪಡಿಸಿದರು. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಲು ವೈಯಕ್ತಿಕ ತ್ಯಾಗ ಮಾಡಿದ್ದು, ನೌಕರರ ಕಡಿತದಿಂದ ಸಂಸ್ಥೆಗೂ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

‘ನಾವೂ ಯಾವಾಗಲೂ ಸೇನೆಯ ಸೇವೆಯ ಬಗ್ಗೆ ಮಾತನಾಡುತ್ತೇವೆ. ವಿದೇಶಾಂಗ ಇಲಾಖೆಯ ನೌಕರರಾಗಿ ಸೇವೆ ಸಲ್ಲಿಸುವ ಮುನ್ನ ಸೇನಾಧಿಕಾರಿಗಳಂತೆ ದೇಶಕ್ಕಾಗಿ ಸೇವೆ ಸಲ್ಲಿಸುವ ಪ್ರಮಾಣವಚನ ಪಡೆದಿದ್ದೆವು’ ಎಂದು 2011ರಲ್ಲಿ ವಿದೇಶಾಂಗ ಇಲಾಖೆಯಿಂದ ನಿವೃತ್ತಿ ಪಡೆದ ಅನ್ನೆ ಬೊಡೈನ್ ಬೇಸರ ವ್ಯಕ್ತಪಡಿಸಿದರು.

‘ಅಮೆರಿಕವೇ ಮೊದಲು ಎಂದು ಭಾವಿಸುವವರು, ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಡೆಸಿಕೊಳ್ಳುವ ಕ್ರಮ ಇದಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.