ಲಾಸ್ ಏಂಜಲಿಸ್: ಕಳೆದ ವಾರ ಪೊಲೀಸ್ ಅಧಿಕಾರಿಯೊಬ್ಬರ ಗುಂಡಿಗೆ ಬಲಿಯಾದ 17 ವರ್ಷದ ಬಾಲಕಿ, ಅದಕ್ಕೂ ಮುನ್ನ ಪೊಲೀಸ್ ಅಧಿಕಾರಿಗೆ ಬಂದೂಕಿನ ಪ್ರತಿಕೃತಿ ತೋರಿಸಿ ಬೆದರಿಸಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ.ಈ ಕುರಿತು ವಿಡಿಯೊ ದೃಶ್ಯಾವಳಿಯನ್ನು ಇಲ್ಲಿನ ಫೂಲರ್ಟನ್ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಜುಲೈ 5ರಂದು ನಡೆದಿದ್ದ ಈ ಘಟನೆಯಲ್ಲಿ ಬಾಲಕಿ ಹನ್ನಾ ವಿಲಿಯಮ್ಸ್ ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಕುಸಿದು ಬಿದ್ದು, ಸಹಾಯಕ್ಕಾಗಿ ಮನವಿ ಮಾಡುತ್ತಿರುವ ದೃಶ್ಯಗಳೂ ವಿಡಿಯೊದಲ್ಲಿ ಇವೆ. ಬಾಲಕಿಯ ಸಮೀಪವೇ ಬಂದೂಕಿನ ಪ್ರತಿಕೃತಿ ಇದ್ದದ್ದೂ ದಾಖಲಾಗಿದೆ. ಘಟನೆಯ ಸತ್ಯಾಸತ್ಯತೆ ಪ್ರಶ್ನಿಸಿದ್ದಹನ್ನಾ ಅವರ ಪೋಷಕರು, ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದರು. ಹೀಗಾಗಿಪೊಲೀಸರು ಈ ಕುರಿತ ವಿಡಿಯೊ ಬಿಡುಗಡೆ ಮಾಡಿದ್ದಾರೆ.

‘ಬಾಲಕಿ ವೇಗವಾಗಿ ವಾಹನ ಚಲಾಯಿಸುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಆಕೆಯನ್ನು ತಡೆಯಲು ಹಿಂಬಾಲಿಸಿದರು. ವೇಗವಾಗಿಯೇ ‘ಯು– ತಿರುವು’ ಪಡೆದ ಬಾಲಕಿ ವಾಹನ ನಿಯಂತ್ರಣ ಕಳೆದುಕೊಂಡು, ತಪ್ಪು ಮಾರ್ಗದಲ್ಲಿ ವಾಹನ ನಿಲ್ಲಿಸಿದಳು. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಪೊಲೀಸ್‌ಗೆ ಗುಂಡು ಹಾರಿಸುವ ಭಂಗಿಯನ್ನು ಬಾಲಕಿ ತೋರಿದಳು. ಕೂಡಲೇ ಪೊಲೀಸ್ ಅಧಿಕಾರಿ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.