ವಾಷಿಂಗ್ಟನ್ (ಪಿಟಿಐ/ಎಎಫ್ಪಿ): 2018ರಲ್ಲಿ ಎಚ್–1ಬಿ ವೀಸಾಗೆ ಅನುಮೋದನೆ ನೀಡುವಲ್ಲಿ ಶೇಕಡ 10ರಷ್ಟು ಕಡಿಮೆಯಾಗಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ನೀತಿಗಳೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲಸದ ವೀಸಾ ಪಡೆಯುವವರ ಮೇಲೆ ನಿಯಂತ್ರಣ ಹೇರಿದ್ದರಿಂದ ಎಚ್–1ಬಿ ವೀಸಾ ನೀಡುವುದು ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಎಚ್–1ಬಿ ವೀಸಾ ಹೊಂದಿದ ವಿದೇಶಿ ಕೆಲಸಗಾರರನ್ನು ವಿಶೇಷ ವೃತ್ತಿಗಳಿಗೆ ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಅವಕಾಶ ದೊರೆಯುತ್ತದೆ. ತಾಂತ್ರಿಕ ಪರಿಣತಿ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.

2018ರಲ್ಲಿ 3.35 ಲಕ್ಷಎಚ್–1ಬಿ ವೀಸಾ ನೀಡಲಾಗಿತ್ತು. 2017ರಲ್ಲಿ 3.73 ಲಕ್ಷ ವೀಸಾಗಳನ್ನು ವಿತರಿಸಲಾಗಿತ್ತು.

ಎಚ್–1ಬಿ ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಟ್ರಂಪ್ ಆಡಳಿತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕೆಲಸದ ವೀಸಾವನ್ನು ದುರುಪಯೋಗಪಡಿಸಿಕೊಂಡು ಅಮೆರಿಕದ ಕೆಲಸಗಾರರಿಗೆ ಉದ್ಯೋಗ ನೀಡದೆ ನಿರಾಕರಿಸಿದ್ದಕ್ಕೆ
ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.