ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel - Palestine Conflict: ಇರಾಕ್ ಪ್ರಧಾನಿ ಜತೆ ಪುಟಿನ್ ಮಾತುಕತೆ

Published 10 ಅಕ್ಟೋಬರ್ 2023, 2:38 IST
Last Updated 10 ಅಕ್ಟೋಬರ್ 2023, 2:38 IST
ಅಕ್ಷರ ಗಾತ್ರ

ಮಾಸ್ಕೊ: ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟು ಹಾಗೂ ದ್ವಿಪಕ್ಷೀಯ ಸಂಬಂಧದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್‌ ಅವರು ಇರಾಕ್ ಪ್ರಧಾನಿ ಮೊಹಮ್ಮದ್‌ ಶಿಯಾ ಅಲ್‌ ಸುಡಾನಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್‌ (ಕ್ರೆಮ್ಲಿನ್‌ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ) ತಿಳಿಸಿದೆ.

ರಷ್ಯಾ ಹಾಗೂ ಇರಾಕ್‌ ಸಹಕಾರವನ್ನು ಅಭಿವೃದ್ಧಿಪಡಿಸುವ ಹಾಗೂ ಅಂತರರಾಷ್ಟ್ರೀಯ ಕಾರ್ಯಸೂಚಿಯಲ್ಲಿನ ಪ್ರಸ್ತುತ ವಿಷಯಗಳು ಮತ್ತು ಮಧ್ಯಪ್ರಾಚ್ಯದ ಸದ್ಯದ ಪರಿಸ್ಥಿತಿಯನ್ನು ವಿವರವಾಗಿ ಚರ್ಚಿಸಲಾಗುವುದು ಎಂದು ಕ್ರೆಮ್ಲಿನ್ ತಿಳಿಸಿದೆ.

ಇದೇ ಮೊದಲ ಬಾರಿ ಪುಟಿನ್‌ ಹಾಗೂ ಸುಡಾನಿಯವರ ಭೇಟಿ ನಡೆಯುತ್ತಿದೆ.

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಇರಾಕ್ ‍‍ಪ್ರಧಾನಿ ಸುಡಾನಿ ಹಾಗೂ ಪುಟಿನ್‌ ಅವರು ಮಂಗಳವಾರ ಎನರ್ಜಿ ಫೋರಂನಲ್ಲೂ ಭಾಗಿಯಾಗಲಿದ್ದಾರೆ ಎಂದು ಕ್ರೆಮ್ಲಿನ್‌ ತಿಳಿಸಿದೆ.

ಇರಾಕ್‌ನಲ್ಲಿ ರಷ್ಯಾದ ಹೂಡಿಕೆ 10 ಲಕ್ಷ ಅಮೆರಿಕನ್ ಡಾಲರ್‌ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಬಹುಪಾಲು ತೈಲದ ಮೇಲೆ ಬಂಡವಾಳ ಹೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT