ಕೀವ್: ರಷ್ಯಾ ಮತ್ತುಉಕ್ರೇನ್ ಸೇನಾಪಡೆಗಳ ನಡುವೆ ನಡೆಯುತ್ತಿರುವಸಂಘರ್ಷದ ಮಧ್ಯೆಯೇ, ಉಕ್ರೇನ್ ಸೇನಾ ಹೋರಾಟಗಾರರಿಬ್ಬರು ಮದುವೆ ಮಾಡಿಕೊಂಡಿದ್ದಾರೆ.

'ಉಕ್ರೇನ್–ರಷ್ಯಾ ಯುದ್ಧ ಪರಿಸ್ಥಿತಿಯಲ್ಲಿ,ಪ್ರಾದೇಶಿಕ ರಕ್ಷಣಾ ಪಡೆಯ ಬ್ರಿಗೇಡ್–112ರಲೇಸ್ಯಾ ಮತ್ತು ವ್ಯಾಲೆರಿ ಇಂದು (ಭಾನುವಾರ) ವಿವಾಹವಾಗಿದ್ದಾರೆ. ಸೇನಾ ಸಿಬ್ಬಂದಿ ಅವರ ಮದುವೆ ಮಾಡಿಸಿದ್ದಾರೆ' ಎಂದು 'ಕೀವ್ ಪೋಸ್ಟ್' ಸುದ್ದಿ ಮಾಧ್ಯಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ಮತ್ತೊಂದು ಸುದ್ದಿ ವರದಿಯಾಗಿತ್ತು.ಯುದ್ಧಪೀಡಿತ ಉಕ್ರೇನ್ನ ಒಡೆಸ್ಸಾದ ಶಿಬಿರವೊಂದರಲ್ಲಿ ಕ್ಲೆವೆಟ್ಸ್ ಮತ್ತು ನತಾಲಿಯಾ ವ್ಲಾಡಿಸ್ಲೇವ್ ಜೋಡಿಯ ವಿವಾಹವಾಗಿತ್ತು.

ಉಕ್ರೇನ್ನಲ್ಲಿ ರಷ್ಯಾ ಪಡೆಗಳು ನಡೆಸುತ್ತಿರುವ ಆಕ್ರಮಣವು 11ನೇ ದಿನಕ್ಕೆ ಕಾಲಿಟ್ಟಿದೆ.ರಷ್ಯಾ ಸೇನೆ ಉಕ್ರೇನ್ನಲ್ಲಿನ ವಿನಿಟ್ಸಿಯಾ ವಿಮಾನ ನಿಲ್ದಾಣವನ್ನು ನಾಶ ಮಾಡಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ,ರಷ್ಯಾದ ಬಾಂಬ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಉಕ್ರೇನ್ ನಗರಗಳಲ್ಲಿ'ನೊ-ಫ್ಲೈ ಜೋನ್' (ಯುದ್ಧ ವಿಮಾನ ಹಾರಾಟ ನಿಷೇಧ ವಲಯ) ಹೇರುವಂತೆ ನ್ಯಾಟೊಗೆ ಮನವಿ ಮಾಡಿದ್ದಾರೆ. ಆದರೆ, ನ್ಯಾಟೊ ಈ ಮನವಿಯನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.