ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ 2ನೇ ಅಲೆ ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆ

Published : 19 ಜೂನ್ 2021, 13:06 IST
ಫಾಲೋ ಮಾಡಿ
Comments

ಝೆರೆಕೋರ್ (ಗಿನಿಯಾ): ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ ಎರಡನೇ ಅಲೆಯು ಅಂತ್ಯಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರ ಘೋಷಿಸಿದೆ. ಎರಡನೇ ಬಾರಿಗೆ ಎಬೋಲಾ ಸಾಂಕ್ರಾಮಿಕಗೊಂಡಿದೆ ಎಂದು ಫೆ. 14ರಂದು ಘೋಷಿಸಲಾಗಿತ್ತು.

‘ಗಿನಿಯಾದಲ್ಲಿ ಎಬೋಲಾ ಅಂತ್ಯವಾಗಿದೆ ಎಂಬುದನ್ನು ಘೋಷಿಸುವ ಗೌರವವು ನನಗೆ ದೊರಕಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಆಲ್ಫ್ರೆಡ್ ಕಿ-ಜೆರ್ಬೊ ಆಗ್ನೇಯ ಝೆರೆಕೋರ್ ಎಂಬಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಿದ್ದಾರೆ. ಇದೇ ಪ್ರದೇಶದಲ್ಲೇ ಜನವರಿಯಲ್ಲಿ ಎಬೋಲಾ ವೈರಸ್‌ ಜನರಿಗೆ ಹರಡಿತ್ತು.

‘ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ ಅಂತ್ಯವನ್ನು ರಾಷ್ಟ್ರ ಅಧ್ಯಕ್ಷ (ಆಲ್ಫಾ ಕಾಂಡೆ) ಅವರ ಹೆಸರಿನಲ್ಲಿ ಘೋಷಿಸಲು ನಾನು ಬಯಸುತ್ತೇನೆ,’ ಎಂದು ಆರೋಗ್ಯ ಸಚಿವ ರೆಮಿ ಲಾಮಾ ತಿಳಿಸಿದರು.

ಗಿನಿಯಾದಲ್ಲಿ 16 ಸೋಂಕು ಪ್ರಕರಣಗಳು ದೃಢವಾಗಿದ್ದವು. ಇನ್ನು ಏಳು ಮಂದಿಗೆ ಸೋಂಕು ಇರುವುದಾಗಿ ಶಂಕಿಸಲಾಗಿತ್ತು. 12 ಮಂದಿ ಮೃತಪಟ್ಟಿದ್ದರು.

ಗಿನಿಯಾ, ಲೈಬೀರಿಯಾ ಮತ್ತು ಸಿಯೆರಾ ಲಿಯೋನ್‌ನಲ್ಲಿ 11,300 ಮಂದಿಯನ್ನು ಬಲಿ ಪಡೆದಿದ್ದ ಎಬೋಲಾ, ಪಶ್ಚಿಮ ಆಫ್ರಿಕಾದಲ್ಲಿ 2013-2016ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಅದಾದ ನಂತರ 1.30 ಕೋಟಿ ಜನಸಂಖ್ಯೆಯ ಬಡ ರಾಷ್ಟ್ರ ಗಿನಿಯಾದಲ್ಲಿ ಇತ್ತೀಚೆಗೆ ಎರಡನೇ ಬಾರಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು.

ಎಬೋಲಾದಿಂದ ಸೋಂಕುಗೊಂಡವರಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಗಂಭೀರ ಪ್ರಕರಣಗಳಲ್ಲಿ ದೇಹದೊಳಗೆ ಅತೀವ ರಕ್ತಸ್ರಾವ ಉಂಟಾಗಿ, ಅಂಗಾಂಗಳು ನಾಶವಾಗುತ್ತವೆ.

ಎಬೋಲಾ ಸೋಂಕು ನಿಯಂತ್ರಣ ಕ್ರಮಗಳ ಜೊತೆಗೇ, ಗಿನಿಯಾದಲ್ಲಿ ಡಬ್ಲ್ಯುಎಚ್‌ಒ ನೆರವಿನೊಂದಿಗೆ ಎಬೋಲಾ ಲಸಿಕೆ ಅಭಿಯಾನವನ್ನು ಅತ್ಯಂತ ಸಮರ್ಥವಾಗಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT