ವಿಶ್ವಸಂಸ್ಥೆ/ಜಿನೀವಾ (ಪಿಟಿಐ): ಭಾರತದ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್ 26 ರಂದು ಸಭೆ ಸೇರಲಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಕೋವ್ಯಾಕ್ಸಿನ್ ಅನ್ನು ಭಾರತದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದಡಿ ಬಳಸಲಾಗುತ್ತಿದೆ.

ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿರುವ ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಸಂಸ್ಥೆಯು ಲಸಿಕೆಯ ಬಳಕೆಗಾಗಿ ಕಳೆದ ಏಪ್ರಿಲ್ 19 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿತ್ತು.

ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್ 26ರಂದು ಸಭೆ ಸೇರಲಿದೆ. ಕೋವ್ಯಾಕ್ಸಿನ್ ಅನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಪರಿಗಣಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಡಬ್ಲ್ಯೂಎಚ್ಒನ ಮುಖ್ಯ ವಿಜ್ಞಾನಿ ಸ್ವಾಮಿನಾಥನ್ ಭಾನುವಾರ ಟ್ವೀಟ್ ಮಾಡಿದ್ದಾರೆ.

‘ಭಾರತ ಬಯೋಟೆಕ್ ಜೊತೆ ವಿಶ್ವ ಆರೋಗ್ಯ ಸಂಸ್ಥೆಯು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಬಳಕೆಗಾಗಿ ವ್ಯಾಪಕವಾಗಿ ಲಸಿಕೆಗಳನ್ನು ಅನುಮೋದಿಸುವುದು ಮತ್ತು ಎಲ್ಲಾ ಜನರಿಗೆ ತಲುಪುವಂತೆ ಮಾಡುವುದು ನಮ್ಮ ಗುರಿಯಾಗಿದೆ’ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.

ಕೋವಿಡ್: ಸಕ್ರಿಯ ಪ್ರಕರಣಗಳ ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.