ಲಾಸ್ ಏಂಜಲೀಸ್: ಕ್ಯಾಲಿಪೋರ್ನಿಯಾದ ಲಾಸ್ ಏಜಂಲೀಸ್ನ ಕಾಡಿನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಸಾವಿರಾರು ಮನೆಗಳು, ವಾಹನಗಳು ಸುಟ್ಟು ಕರಕಲಾಗಿವೆ. ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಟಾ ಮೋನಿಕಾ ಬಳಿಯ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶವನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದ ಗಾಳಿ ತೀವ್ರವಾಗಿ ಬೀಸುತ್ತಿರುವ ಕಾರಣ ಬೆಂಕಿ ಎಲ್ಲೆಡೆ ಹರಡುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸುಮಾರು 10 ಸಾವಿರ ಮನೆಗಳು ಬೆಂಕಿಯಿಂದ ಬಾಧಿತವಾಗಿದ್ದು 30 ಸಾವಿರನ್ನು ರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮನೆ, ವಾಹನಗಳಿಗೆ ಹೊತ್ತಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಮಾರು 200 ಎಕರೆಯಷ್ಟು ಜಾಗವನ್ನು ಕಾಡ್ಗಿಚ್ಚು ಆವರಿಸಿದೆ ಎಂದು ಅಗ್ನಿಶಾಮಕದಳದ ಮುಖ್ಯಸ್ಥರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ರಾಜ್ಯಪಾಲ ಗೆವಿನ್ ನ್ಯೂಸೊಮ್ ಅವರು ಲಾಸ್ ಏಜಂಲೀಸ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.