ಹಾಂಗ್‌ಕಾಂಗ್: ಜಗತ್ತಿನಲ್ಲೇ ಅತಿ ಹಿರಿಯದು ಮತ್ತು ಗಂಡು ಪಾಂಡಾಗಳಲ್ಲೇ ಇದುವರೆಗೆ ಅತಿ ಹೆಚ್ಚು ವರ್ಷ (35ವರ್ಷ) ಬದುಕಿದ್ದ ಅನ್‌ಅನ್ ಎನ್ನುವಪಾಂಡಾ ಅನಾರೋಗ್ಯದಿಂದ ಹಾಂಗ್‌ಕಾಂಗ್‌ನ ಮೃಗಾಲಯದಲ್ಲಿ ಬುಧವಾರ ಮೃತಪಟ್ಟಿರುವುದು ವರದಿಯಾಗಿದೆ.

ಹಾಂಗ್‌ಕಾಂಗ್‌ನ ಓಸಿಯನ್ ಪಾರ್ಕ್ ಮೃಗಾಲಯದಲ್ಲಿ ಈ ಅನ್‌ಅನ್ಪಾಂಡಾ ವಾಸವಾಗಿತ್ತು. ಪಾಂಡಾ ನಿಧನಕ್ಕೆ ಮೃಗಾಯಲದ ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಹಾಂಗ್‌ಕಾಂಗ್ ಜನ ಪಾಂಡಾ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ.

1999 ರಲ್ಲಿ ಚೀನಾ ಜಿಯಾ ಜಿಯಾ ಹೆಸರಿನ ಒಂದು ಹೆಣ್ಣು ಪಾಂಡಾವನ್ನು ಹಾಂಗ್‌ಕಾಂಗ್ ಓಸಿಯನ್ ಪಾರ್ಕ್‌ಗೆ ಕೊಟ್ಟಿತ್ತು. ಅದು 38 ವರ್ಷ ಬದುಕಿ ಕಳೆದ 2016 ರಲ್ಲಿ ಮೃತಪಟ್ಟಿತ್ತು. ಹೆಣ್ಣು ಪಾಂಡಾಗಳಲ್ಲಿ ಇದೇ ಅತಿ ಹೆಚ್ಚು ವರ್ಷ ಬದುಕಿತ್ತು.

‘ಅನ್‌ಅನ್ ನಿಧನದಿಂದ ನಾವು ನಮ್ಮ ಒಬ್ಬ ಆತ್ಮೀಯ ಸ್ನೇಹಿತನ ಕಳೆದುಕೊಂಡಂತಾಗಿದೆ. ಅನ್‌ಅನ್ ನೆನಪುಗಳು ಅಜರಾಮರವಾಗಿರುತ್ತವೆ. ಅದೊಂದು ಅದ್ಭುತ ಜಾಣ ಪಾಂಡಾ ಆಗಿತ್ತು. ನಾವು ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಓಸಿಯನ್ ಪಾರ್ಕ್‌ನ ಮುಖ್ಯಸ್ಥ ಪಾವಲೋ ಪಾಂಗ್ ಹೇಳಿದ್ದಾರೆ.

‘ಕಳೆದ ಒಂದು ತಿಂಗಳಿಂದ ಅನ್‌ಅನ್ಅಧಿಕ ರಕ್ತದೊತ್ತಡದಿಂದ ಬಳಲುತ್ತಿತ್ತು. ಕ್ರಿಯಾಶೀಲವಾಗಿರಲಿಲ್ಲ’ ಎಂದು ಅವರು ತಿಳಿಸಿದ್ದಾರೆ. ಹಾಂಗ್‌ಕಾಂಗ್‌ನಲ್ಲಿ ಆನ್‌ಆನ್ ಬದುಕುವಂತೆ ಅನೇಕ ಜನ ಒಂದು ವಾರದಿಂದ ಪ್ರಾರ್ಥಿಸಿದ್ದರು.

ಸಹಜವಾಗಿ ಅತಿ ಹೆಚ್ಚು ಅಂದರೆ ಪಾಂಡಾಗಳು 30–32ವರ್ಷ ಬದುಕುತ್ತವೆ. ಚೀನಾ ದೇಶ ಪಾಂಡಾಗಳ ನೈಸರ್ಗಿಕ ಆವಾಸಸ್ಥಾನವಾಗಿದೆ.

ನಾನು ಮಿಸ್ ಇಂಡಿಯಾ ಆಗಲು ಮಾರಿಯಮ್ಮ ದೇವಿ ಕಾರಣ: ಸಿನಿ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.