ಲುಸಾಕಾ: ಜಾಂಬಿಯಾದದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಹಾಗೂ ವಿರೋಧಪಕ್ಷದ ನಾಯಕ ಹಕೈಂಡೆ ಹಿಚಿಲೆಮಾ ಅವರು ಸೋಮವಾರ ಭರ್ಜರಿ ಜಯ ಗಳಿಸಿದ್ದಾರೆ.

ಜಾಂಬಿಯಾದ ಅಧ್ಯಕ್ಷ ಎಡ್ಗರ್ ಲುಂಗು ಅವರ ವಿರುದ್ಧ ಹಿಚಿಲೆಮಾ ಅವರು 28,10,757 ಮತಗಳಿಂದ ವಿಜಯ ಸಾಧಿಸಿದ್ದಾರೆ. ಲುಂಗು ಅವರು 18,14,201 ಮತ ಗಳಿಸಿದ್ದಾರೆ. ಹಿಚಿಲೆಮಾ ಅವರು ಜಾಂಬಿಯಾದ ಮುಂದಿನ ಅಧ್ಯಕ್ಷ ಎಂದು ಚುನಾವಣಾ ಆಯೋಗವು ಘೋಷಿಸಿದೆ.

‘ಬದಲಾವಣೆಗಾಗಿ ನಾವು ಮತ ಚಲಾಯಿಸಿದ್ದೇವೆ. ಉಬುಂಟು (ಮಾನವೀಯತೆ) ಮನೋಭಾವವನ್ನು ಪ್ರೀತಿಸಲು ಮತ್ತು ಸಾಮರಸ್ಯದಿಂದ ಬದುಕಲು ಒಪ್ಪಿಕೊಳ್ಳೋಣ’ ಎಂದು ಹಿಚಿಲೆಮಾ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹಿಚಿಲೆಮಾ ಅವರ ಸಾವಿರಾರು ಬೆಂಬಲಿಗರು ಲುಸಾಕಾದ ಬೀದಿಗಳಲ್ಲಿ ಹಾಡು, ನೃತ್ಯದ ಮೂಲಕ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.