ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಿಗೆ ಸಿಗುವ ವಾರ್ಷಿಕ ವೇತನ 4 ಲಕ್ಷ ಡಾಲರ್ (ಅಂದಾಜು ₹ 2 ಕೋಟಿ 70 ಲಕ್ಷ). ಆದರೆ, ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ಒಂದು ಡಾಲರ್ (₹ 67) ವೇತನ ಪಡೆಯುವುದಾಗಿ ಘೋಷಿಸಿದ್ದಾರೆ.

ಅಧ್ಯಕ್ಷ ಗಾದಿಗೆ ಏರಿದರೆ ವೇತನ ಪಡೆಯುವುದಿಲ್ಲ ಎಂದು ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯ ವೇಳೆ ಟ್ರಂಪ್ ಅಮೆರಿಕನ್ನರಿಗೆ ಭರವಸೆ ನೀಡಿದ್ದರು.

‘ಕಾನೂನಿನ ಪ್ರಕಾರ ವೇತನ ಪಡೆಯಬೇಕಾಗಿರುವುದರಿಂದ ನಾನು ವಾರ್ಷಿಕ ಒಂದು ಡಾಲರ್ ವೇತನ ಪಡೆಯುತ್ತೇನೆ’ ಎಂದು ಟ್ರಂಪ್ ಭಾನುವಾರ ಪ್ರಸಾರವಾದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷರಿಗೆ ಎಷ್ಟು ವೇತನ ಇದೇ ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.