ಕಾಬೂಲ್ (ಎಪಿ): ಆಫ್ಘಾನಿಸ್ತಾನದಲ್ಲಿ 16 ನಾಗರಿಕರನ್ನು ಅಮಾನುಷವಾಗಿ ಕೊಂದ ಅಮೆರಿಕದ ಸೈನಿಕನ ಮೇಲೆ ಆಫ್ಘಾನಿಸ್ತಾನದ ಕಾನೂನಿಗೆ ಅನುಗುಣವಾಗಿ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವಾಗಲೇ ಆತನನ್ನು ಕುವೈತ್ಗೆ ವರ್ಗಾಯಿಸಲಾಗಿದೆ ಎಂಬ ವರದಿ ಹೊರಬಿದ್ದಿದೆ.

ಈ ಸುದ್ದಿಗೆ ಆಫ್ಘನ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿಲ್ಲ. ಆದರೆ, ಆತನನ್ನು ವರ್ಗಾಯಿಸಲಾಗಿದೆ ಎಂದ ಮಾತ್ರಕ್ಕೆ ಈ ಪ್ರಕರಣದ ವಿಚಾರಣೆ ಆಫ್ಘಾನಿಸ್ತಾನದಲ್ಲಿ ನಡೆಯುವುದಿಲ್ಲ ಎಂದಲ್ಲ. ಆತ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಮರಣದಂಡನೆವಿಧಿಸಬಹುದಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪನೆಟ್ಟಾ ಹೇಳಿದ್ದಾರೆ.

ಬುಧವಾರ ಸಂಜೆಯವರೆಗೆ ಆ ಸೈನಿಕ ಕಂದಹಾರ್ನಲ್ಲಿ ಅಮೆರಿಕ ಸೈನ್ಯದ ವಶದಲ್ಲಿದ್ದ. ನಂತರ ಆತನನ್ನು ಕುವೈತ್ಗೆ ಕಳುಹಿಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಅಮೆರಿಕ ನಿಭಾಯಿಸಿದ ರೀತಿಯಿಂದ ಉಭಯ ದೇಶಗಳ ನಡುವೆ ಈಗಾಗಲೇ ಹದಗೆಟ್ಟಿರುವ ಸಂಬಂಧ ಮತ್ತಷ್ಟು ಬಿಗಡಾಯಿಸಬಹುದು ಎನ್ನಲಾಗಿದೆ.

ಕಳೆದ ತಿಂಗಳು ಅಮೆರಿಕದ ಸೈನಿಕರು ಕುರಾನ್ ಪ್ರತಿ ಸುಟ್ಟುಹಾಕಿದಾಗ ಆ ದೇಶದ ವಿರುದ್ಧ ಭಾರಿ ಆಕ್ರೋಶ ಕಂಡುಬಂದಿತ್ತು. ಅಮೆರಿಕ ಜತೆ ಎಲ್ಲ ಸಂಬಂಧ ಕಡಿದುಕೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.