ಕ್ಯುಬೆಕ್ ನಗರ, ಕೆನಡಾ: ಕೆನಡಾದ ಕ್ಯುಬೆಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ಶಸ್ತ್ರಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ 6 ಮಂದಿ ಸಾವಿಗೀಡಾಗಿದ್ದಾರೆ. ಭಾನುವಾರ ಸಂಜೆ ಪ್ರಾರ್ಥನೆ ವೇಳೆಗೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.

ದಾಳಿ ನಂತರ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಉಗ್ರರ ಕೃತ್ಯ ಎಂದು ಪೊಲೀಸ್ ಇಲಾಖೆ ವಕ್ತಾರೆ ಕ್ರಿಸ್ಟಿಯನ್ ಕೌಲೊಂಬೆ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡಿ, ‘ದೇಶ ಕಟ್ಟುವ ವಿಚಾರದಲ್ಲಿ ಮುಸ್ಲಿಂ ಹಾಗೂ ಕೆನಡಾದ ನಿವಾಸಿಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇಂತಹ ಅಮಾನವೀಯ ಕೃತ್ಯಗಳಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ’ ಎಂದು ತಿಳಿಸಿದ್ದಾರೆ.

ರಾತ್ರಿ 7.15ರ ಸುಮಾರಿಗೆ ಈ ದಾಳಿ ನಡೆದಿದ್ದು, ಮೃತರು 35 ರಿಂದ 75 ವರ್ಷದ ಒಳಗಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸಿಗ ಮುಸ್ಲಿಂರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವುದಾಗಿ ಭಾನುವಾರ ಜಸ್ಟಿನ್ ಟ್ರುಡಿ ಹೇಳಿಕೆ ನೀಡಿದ್ದರು, ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ಕೆನಡಾದಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಜೂನ್ ತಿಂಗಳಲ್ಲಿ ಈ ಮಸೀದಿಯೂ ದುಷ್ಕರ್ಮಿಗಳ ಜನಾಂಗೀಯ ಆಕ್ರಮಣಕ್ಕೆ ತುತ್ತಾಗಿತ್ತು.

ಇದೊಂದು ಭಯೋತ್ಪಾದಕ ದಾಳಿ. ಇಂತಹ ಕೃತ್ಯಗಳಿಗೆ ದೇಶದಲ್ಲಿ ಜಾಗವಿಲ್ಲ.
–ಜಸ್ಟಿನ್ ಟ್ರುಡಿ,
ಕೆನಡಾ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.