ಬೀಜಿಂಗ್: ಚೀನಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–1’ ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ ಸೋಮವಾರ ಪತನವಾಗಿದೆ.

‘ಸ್ಥಳೀಯ ಕಾಲಮಾನ 8.15ಕ್ಕೆ ಪತನಗೊಂಡಿದೆ. ತೀವ್ರ ವೇಗದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ನಂತರ ಅಗಾಧ ಬಿಸಿಯ ಪರಿಣಾಮ ‘ಟಿಯಾಂಗಾಂಗ್–1’ ವಿಭಜನೆ ಆಗಿರಬಹುದು’ ಎಂದು ಚೀನಾದ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ ಹೇಳಿದೆ.

‘ಹೆಚ್ಚಿನ ಭಾಗಗಳು ಸುಟ್ಟು, ಕಣ್ಮರೆಯಾಗಿವೆ. ಅವಶೇಷಗಳು ಬಿದ್ದ ನಿರ್ದಿಷ್ಟ ಜಾಗದ ಗುರುತು ಸಿಕ್ಕಿಲ್ಲ. ಈ ಪತನದಿಂದಾಗಿ ಭೂಮಿಗೆ ಯಾವುದೇ ಹಾನಿ ಆಗಿರುವುದೂ ತಿಳಿದುಬಂದಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಜ್ ಶುವಾಂಗ್ ತಿಳಿಸಿದ್ದಾರೆ.

‘ಸ್ವರ್ಗದ ಅರಮನೆ’ ಎಂದೂ ಕರೆಯಲಾಗುತ್ತಿದ್ದ ಟಿಯಾಂಗಾಂಗ್–1ಅನ್ನು ಸೆಪ್ಟೆಂಬರ್ 2011ರಲ್ಲಿ ಉಡಾವಣೆ ಮಾಡಲಾಗಿತ್ತು.

‘ಬಾಹ್ಯಾಕಾಶ ಯೋಜನೆಗಳಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಟಿಯಾಂಗಾಂಗ್–1, ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ ಮತ್ತು ಬಾಹ್ಯಾಕಾಶ ನಿಲ್ದಾಣ ನಿರ್ಮಾಣದಲ್ಲಿ ಅತ್ಯಮೂಲ್ಯ ಅನುಭವಗಳನ್ನು ಒದಗಿಸಿದೆ’ ಎಂದು
ಚೀನಾದ ಗಗನಯಾನ ಕೇಂದ್ರದ ಉಪ ಮುಖ್ಯಸ್ಥೆ ಹುವಾಂಗ್ ವೀಫೆನ್ ಹೇಳಿದ್ದಾರೆ.

2022ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಸಲುವಾಗಿ, ಪ್ರಾಯೋಗಿಕವಾಗಿ 2011ರಲ್ಲಿ ‘ಟಿಯಾಂಗಾಂಗ್–1’ ಅನ್ನು ಚೀನಾ ಉಡಾವಣೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.