ಒರ್ಲಾಂಡೊ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಒಂದು ವಾರ ಬಾಕಿ ಉಳಿದಿರುವಂತೆಯೇ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಲಕ್ಷಾಂತರ ಡಾಲರ್ ವ್ಯಯಿಸಿ ಅಬ್ಬರದ ಜಾಹೀರಾತು ಪ್ರಚಾರ ಕೈಗೊಂಡಿದ್ದಾರೆ.

ಎರಡು ಪಕ್ಷದ ಅಭ್ಯರ್ಥಿಗಳು ಮಂಗಳವಾರ ಪ್ರಚಾರದ ವಿಡಿಯೋ ಜಾಹೀರಾತನ್ನು ಬಿಡುಗಡೆಗೊಳಿಸಿದ್ದಾರೆ. ಅಂದಾಜಿನ ಪ್ರಕಾರ, ಎರಡು ಪಕ್ಷಗಳು ಜಾಹೀರಾತಿಗಾಗಿಯೇ ₹280 ಕೋಟಿ ಗಿಂತಲೂ ಹೆಚ್ಚು ವೆಚ್ಚ ಮಾಡುವ ನಿರೀಕ್ಷೆ ಇದೆ.

‘ಆಯ್ಕೆ’ ಹೆಸರಿನಡಿಯಲ್ಲಿ ಟ್ರಂಪ್ ಜಾಹೀರಾತು ಬಿಡುಗಡೆಗೊಳಿಸಿದ್ದು, ಸಶಕ್ತ ಅಮೆರಿಕದ ಮರುನಿರ್ಮಾಣಕ್ಕಾಗಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
‘ಹಳೆಯ ಮತ್ತು ವಿಫಲವಾದ ನೀತಿಗಳು ಹಾಗೂ ಉಜ್ವಲ ಭವಿಷ್ಯ ಮತ್ತು ಸಕಾರಾತ್ಮಕ ದೂರದೃಷ್ಟಿ ಹೊಂದಿರುವವರ ನಡುವಣ ಚುನಾವಣೆ ಇದಾಗಿದೆ’ ಎಂದು ಟ್ರಂಪ್ ಅವರ ಪ್ರಚಾರ ವ್ಯವಸ್ಥಾಪಕ ಜಾಸನ್ ಮಿಲ್ಲರ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ‘ಅಮೆರಿಕಕ್ಕೆ ಹಿಲರಿ’ ಎನ್ನುವ ಜಾಹೀರಾತುಗಳನ್ನು ಬಿಡುಗಡೆಗೊಳಿಸಲಾಗಿದೆ.

ಈ ಜಾಹೀರಾತಿನಲ್ಲಿ ಟ್ರಂಪ್ ದ್ವೇಷಪೂರಿತ ಭಾಷಣ, ಮಹಿಳೆಯರ ಜತೆಯ ನಡವಳಿಕೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ, ಮತದಾರರ ಮನಸೆಳೆಯಲು ಮುಂದಾಗಿದ್ದಾರೆ.

ಹಲವು ರಾಜ್ಯಗಳಲ್ಲಿ ಟ್ರಂಪ್ ಹಾಗೂ ಹಿಲರಿ ವಿರುದ್ಧ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ನಿಟ್ಟಿನಲ್ಲಿ ಪ್ರಮುಖ ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವುದು ಇಬ್ಬರಿಗೂ ಅನಿವಾರ್ಯವಾಗಿದೆ.

ನವೆಂಬರ್ 8ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಫ್ಲಾರಿಡಾ, ಒಹಿಯೋ ರಾಜ್ಯಗಳಲ್ಲಿ ಟ್ರಂಪ್ ಹಾಗೂ ಹಿಲರಿ ಪರ ಅಧ್ಯಕ್ಷ ಬರಾಕ್ ಒಬಾಮ ಕೊನೆಯ ಕ್ಷಣದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವಾರದ ಮೊದಲ ದಿನ ಫ್ಲಾರಿಡಾದಲ್ಲಿ ಹಿಲರಿ ಪ್ರಚಾರ ಕಾರ್ಯ ನಡೆಸಿದರೆ, ಒಹಿಯೋದಲ್ಲಿ ಒಬಾಮ ಪ್ರಚಾರ ನಡೆಸಿದ್ದರು.

ಪೆನ್ಸಿಲ್ವೇನಿಯಾದಲ್ಲಿ ಈಗಾಗಲೇ ಬಹಿರಂಗ ಪ್ರಚಾರ ನಡೆಸಿರುವ ಟ್ರಂಪ್, ಮುಂದಿನ ಎರಡು ದಿನಗಳಲ್ಲಿ ಫ್ಲಾರಿಡಾದ ಮೂರು ರ್‌್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಕೊನೇ ಕ್ಷಣದಲ್ಲಿ ತಮ್ಮ ನಾಯಕರ ಜತೆಗೂಡಿ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ಇಬ್ಬರು ನಾಯಕರು ಈಗಾಗಲೇ ಪ್ರಕಟಿಸಿದ್ದಾರೆ.

‘ನಾನು ರಾಜಕಾರಣಿಯಲ್ಲ’
ವ್ಯಾಲಿಫೋರ್ಜ್: ಉತ್ಪಾದನಾ ಕ್ಷೇತ್ರದ ಉದ್ಯೋಗಗಳನ್ನು ಅಮೆರಿಕಕ್ಕೆ ಮತ್ತೆ ಹಿಂದೆ ತರುವುದಾಗಿ ಘೋಷಿಸಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಹಾಲಿ ಸರ್ಕಾರದ ‘ಒಬಾಮಕೇರ್’ ಯೋಜನೆಯು ದೇಶದ ಮಹಾದುರಂತ ಎಂದು ಲೇವಡಿ ಮಾಡಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಏರ್ಪಡಿಸಿದ್ದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಾನು ವೃತ್ತಿಪರ ರಾಜಕಾರಣಿಯಲ್ಲ. ದೇಶಕ್ಕ ಒಳಿತು ಮಾಡುವ ದೃಷ್ಟಿಯಿಂದ ಈ ಚುನಾವಣೆಯನ್ನು ಎದುರಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಹಾಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಒಬಾಮಕೇರ್’ ಮಹಾದುರಂತ ಎಂದು ಹೇಳಿದ್ದು, ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಹಾಳುಗೆಡವಿದೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಯೋಜನೆಯನ್ನು ಮರುಪರಿಶೀಲಿಸುವ ಉದ್ದೇಶದಿಂದ ವಿಶೇಷ ಅಧಿವೇಶನ ನಡೆಸಲಾಗುವುದು’ ಎಂದು ಇದೇ ವೇಳೆ ಘೋಷಿಸಿದರು.

ಅಮೆರಿಕಕ್ಕಾಗಿ ಸ್ಪರ್ಧೆ: ‘ಉದ್ಯಮಿಯಾಗಿ ಅತ್ಯುತ್ತಮವಾದ ಜೀವನ ನಡೆಸುತ್ತಿದ್ದೇನೆ. ದೇಶ ಕಳೆದುಕೊಂಡಿರುವುದನ್ನು ಮರುಪಡೆಯುವ ಉದ್ದೇಶದಿಂದ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದು, ದೇಶದ ಬಗ್ಗೆ ನೈಜ ಪ್ರೀತಿ ಹೊಂದಿದ್ದೇನೆ. ನಾನು ದೇಶದ ಒಳಿತಿಗಾಗಿ ಗಮನಹರಿಸಿದ್ದು, ಈ ಆ ಬಗ್ಗೆಯೇ ಹೆಚ್ಚು ವಿಶೇಷ ಅಸ್ಥೆ ವಹಿಸಿದ್ದೇನೆ’ ಎಂದು ಪ್ರಕಟಿಸಿದರು.

‘ಟ್ರಂಪ್ ಅಯೋಗ್ಯ, ಅನರ್ಹ ಅಭ್ಯರ್ಥಿ’
‘ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಲು ‘ಅನರ್ಹ ಹಾಗೂ ಅಯೋಗ್ಯ ಅಭ್ಯರ್ಥಿ’ ಎಂದು ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಕಳೆದ ಮೂರು ದಶಕಗಳ ಕಾಲ ಸಾರ್ವಜನಿಕ ಸೇವೆಯ ಅನುಭವ ಹೊಂದಿದ್ದೇನೆ. ನನ್ನ ಜೀವನದುದ್ದಕ್ಕೂ ಮಕ್ಕಳು ಹಾಗೂ ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದೇನೆ’ ಎಂದು ಫ್ಲಾರಿಡಾದ ಡೇಲ್ ಸಿಟಿಯಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ.

‘ವಿದೇಶಾಂಗ ಸಚಿವೆಯಾಗಿ 112 ದೇಶಗಳಿಗೆ ಭೇಟಿ ನೀಡಿದ್ದು, ದೇಶದ ಹಿತಾಸಕ್ತಿಯನ್ನು ಕಾಪಾಡಿದ್ದೇನೆ. ಅಧ್ಯಕ್ಷೆಯಾಗಿ ಆಯ್ಕೆ ಮಾಡಿದರೆ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಟ್ರಂಪ್ ವಿಲಕ್ಷಣ ಅಭ್ಯರ್ಥಿ: ಒಬಾಮ
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಲು ಅನರ್ಹ ಹಾಗೂ ವಿಲಕ್ಷಣ ಅಭ್ಯರ್ಥಿಯಾಗಿದ್ದು, ಟ್ರಂಪ್ ವಿಚಾರದಲ್ಲಿ ರಿಪಬ್ಲಿಕನ್ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದೂರಿದ್ದಾರೆ.

ಒಹಿಯೋದ ಕೊಲಂಬಸ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸೇನಾ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸಲು ಟ್ರಂಪ್ ಅನರ್ಹ ವ್ಯಕ್ತಿ. ಚಂಚಲಚಿತ್ತದಿಂದ ಕೂಡಿರುವ ಅವರು ಮುಂದಿನ ಅಧ್ಯಕ್ಷರಾಗಲು ತಕ್ಕುದಾದ ವ್ಯಕ್ತಿಯಲ್ಲ ಎಂದು ಟೀಕಿಸಿದ್ದಾರೆ. ‘ಅವರೊಬ್ಬ ವಂಚಕ. ಸ್ವಭಾವತಃ ಪುಕ್ಕಲ. ಅಧ್ಯಕ್ಷೀಯ ಜವಾಬ್ದಾರಿ ನಿರ್ವಹಿಸುವುದಕ್ಕೆ ಯಾವುದೇ ಯೋಗ್ಯತೆ ಹೊಂದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.