ಟ್ರಿಪೋಲಿ (ಎಎಫ್‌ಪಿ): ಲಿಬಿಯಾದಲ್ಲಿ ಮುಅಮ್ಮರ್ ಗಡಾಫಿ ಬೆಂಬಲಿಗರು ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಮಧ್ಯಂತರ ಮಂಡಳಿ (ಎನ್‌ಟಿಸಿ) ಸರ್ಕಾರದ ನಿಷ್ಠರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಈ ಘರ್ಷಣೆಯಲ್ಲಿ ಇಬ್ಬರು ಗಡಾಫಿ ಬೆಂಬಲಿಗರು ಮತ್ತು ಎನ್‌ಟಿಸಿ ಭದ್ರತಾ ಸಿಬ್ಬಂದಿಯೊಬ್ಬ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಟಿಸಿ ಭದ್ರತಾ ಸಮಿತಿ ಉಪಾಧ್ಯಕ್ಷ ಅಬ್ದುಲ್‌ರಜಾಕ್ ಅಲ್- ಅರಾದಿ ತಿಳಿಸಿದ್ದಾರೆ.

`ಗಡಾಫಿಯ 50ಕ್ಕೂ ಹೆಚ್ಚು ಬೆಂಬಲಿಗರು ಈ ಹಿಂಸಾಚಾರ ನಡೆಸಿದ್ದಾರೆ. 27 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ನಾಲ್ವರು ಆಫ್ರಿಕಾದವರು. ಗಡಾಫಿ ಬೆಂಬಲಿಗರು ಹಣದಾಸೆ ತೋರಿಸಿ ಆಫ್ರಿಕಾದಿಂದ ಜನರನ್ನು ಕರೆತರುತ್ತಿದ್ದಾರೆ~ ಎಂದು ಅರಾದಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.