ನಟಿ ಮಾಧುರಿ ದೀಕ್ಷಿತ್ ಮೇಣದ ಪ್ರತಿಮೆ
ಲಂಡನ್ (ಪಿಟಿಐ): ಇಲ್ಲಿನ ಪ್ರಖ್ಯಾತ `ಮೇಡಂ ಟುಸ್ಸಾಡ್ಸ್~ ಮ್ಯೂಸಿಯಂನಲ್ಲಿ ಬಾಲಿವುಡ್‌ನ ಹೆಸರಾಂತ ನಟಿ ಮಾಧುರಿ ದೀಕ್ಷಿತ್ ಅವರ ಮೇಣದ ಪ್ರತಿಮೆ ನಿರ್ಮಾಣವಾಗಲಿದೆ.

ಈ ಮ್ಯೂಸಿಯಂನಲ್ಲಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ನಟಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್ ಅವರ ಮೇಣದ ಪ್ರತಿಮೆಗಳಿವೆ.

ಗಾಂಧೀಜಿ ಸ್ಮಾರಕ ನಿರ್ಮಿಸಲು ನಿರ್ಧಾರ
ಜೆರುಸಲೇಂ (ಪಿಟಿಐ): ಶಾಂತಿದೂತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಸ್ಥಾಪಿಸಲು ಜೆರುಸಲೇಂ ನಗರಸಭೆ ನಿರ್ಧರಿಸಿದೆ. ಈ ಸ್ಮಾರಕವು ಗಾಂಧೀಜಿಯ ಪ್ರತಿಮೆ ಮತ್ತು ಧ್ಯಾನ ಕೇಂದ್ರವನ್ನೂ ಒಳಗೊಳ್ಳಲಿದೆ.

`ಗಾಂಧೀಜಿ ನಿಧನರಾದ 64 ವರ್ಷಗಳ ಬಳಿಕ ಈ ಇಂಗಿತ ವ್ಯಕ್ತವಾಗಿದ್ದು, ಈ ಸ್ಮಾರಕವು ಅರಬ್ಬರು ನೆಲೆಸಿರುವ ಜಬೆಲ್ ಮುಕಬೆರ್ ಮತ್ತು ಯಹೂದಿಗಳಿರುವ ಅರ್ಮೊನ್ ಹ್ಯಾನೆಟ್ಸಿವ್ ಸಂಪರ್ಕಿಸುವ ಸ್ಥಳದಲ್ಲಿ ನಿರ್ಮಿಸಲಾಗುವುದು~ ಎಂದು ಈ ಯೋಜನೆಯ ರೂವಾರಿ ಡಾ. ಮೇರ್ ತಿಳಿಸಿದ್ದಾರೆ.

ಜೈಲಿನಲ್ಲಿ ಘರ್ಷಣೆ: 31 ಸಾವು
ನ್ಯುವೊ ಲಾರೆಡೊ (ಮೆಕ್ಸಿಕೊ)(ಐಎಎನ್‌ಎಸ್): ನಗರದ ಈಶಾನ್ಯ ಭಾಗದಲ್ಲಿರುವ ಸಾಂತಾ ಅಮಾಲಿಯಾ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದು 13 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನ ಸುತ್ತ ಪೊಲೀಸರು ಹಾಗೂ ಸೈನಿಕರು ಸುತ್ತುವರಿದು ಅಂತಿಮವಾಗಿ ಘಟನೆಯನ್ನು ನಿಯಂತ್ರಣಕ್ಕೆ ತರಲಾಯಿತು.ಈಗಾಗಲೇ 13 ಕೈದಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದ ನಕಾಶೆ: ತಪ್ಪು ತಿದ್ದಿಕೊಂಡ ಅಮೆರಿಕ
ವಾಷಿಂಗ್ಟನ್ (ಪಿಟಿಐ): ಭಾರತದ ಭೌಗೋಳಿಕ ಗಡಿಯನ್ನು ತೋರಿಸುವಲ್ಲಿ ಈ ಮೊದಲು ತಪ್ಪೆಸಗಿದ್ದ ಅಮೆರಿಕದ ವಿದೇಶಾಂಗ ಖಾತೆಯು ಈಗ ತಪ್ಪನ್ನು ಸರಿಪಡಿಸಿ ಹೊಸ ಭಾರತದ ನಕಾಶೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಮೊದಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದ ಭಾರತದ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶವೆಂಬಂತೆ ಬಿಂಬಿಸಲಾಗಿತ್ತು. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ನಕಾಶೆಯನ್ನು ವಾಪಸ್ ಪಡೆಯಲಾಗಿತ್ತು.

ಅತ್ಯಾಚಾರ: 32 ವರ್ಷ ಸಜೆ
ನ್ಯೂಯಾರ್ಕ್ (ಪಿಟಿಐ): ಭಾರತೀಯ ಮೂಲದ ಗೆಳತಿ ಮೇಲೆ ಅತ್ಯಾಚಾರ ಎಸಗಿದ ನ್ಯೂಯಾರ್ಕ್‌ನ ಖಾಸಗಿ ಪತ್ತೇದಾರಿ ವ್ಯಕ್ತಿಗೆ ನ್ಯಾಯಾಲಯ 32 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಗಯಾನಾದ ಭಾರತೀಯ ಮೂಲದ ಜೆರ‌್ರಿ ರಾಮ್‌ರತನ್ (39) ಎಂಬಾತನೇ ಕಾರಾಗೃಹ ಶಿಕ್ಷೆಗೆ ಒಳಗಾದವ.
ಅತ್ಯಾಚಾರ, ಸುಳ್ಳು ಸಾಕ್ಷ್ಯ, ಒಳಸಂಚು, ಅಕ್ರಮವಾಗಿ ಸಾಕ್ಷಿಗಳನ್ನು ನಾಶಪಡಿಸುವಿಕೆ ಆರೋಪಗಳ ಅಡಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕ್ವೀನ್ಸ್ ಜಿಲ್ಲೆಯ ವಕೀಲ ರಿಚರ್ಡ್ ಬ್ರೌನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.