ನ್ಯೂಯಾರ್ಕ್: ಭಾರತ–ಅಮೆರಿಕ ಪ್ರಜೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಮೂಲಕ ಕ್ಯಾಲಿಫೋರ್ನಿಯಾ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಭಾರತದ ಚೆನ್ನೈ ಮೂಲದವರಾಗಿದ್ದು, 1960ರಲ್ಲಿ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದಿದ್ದರು. ಕಮಲಾ ತಂದೆ ಡೊನಾಲ್ಡ್ ಗ್ರೀವ್ ಜಮೈಕಾ ಮೂಲದವರು.

ಕಮಲಾ ಹೆಗ್ಗಳಿಕೆಗಳು
* ಸೆನೆಟ್‌ಗೆ ಆಯ್ಕೆಯಾದ ಎರಡನೇ ಕಪ್ಪು ವರ್ಣೀಯ ಮಹಿಳೆ
* ಕಳೆದ 20 ವರ್ಷಗಳಲ್ಲಿ ಸೆನೆಟ್‌ಗೆ ಆಯ್ಕೆಯಾದ ಏಕೈಕ ಕಪ್ಪು ವರ್ಣೀಯ ಮಹಿಳೆ
* ಸೆನೆಟ್‌ಗೆ ಆಯ್ಕೆಯಾದ ಆರನೇ ಕಪ್ಪು ವರ್ಣೀಯ ವ್ಯಕ್ತಿ

ಪ್ರಮೀಳಾ ಜಯಪಾಲ್
ಚೆನ್ನೈ ಮೂಲದವರಾದ ಪ್ರಮೀಳಾ ಜಯಪಾಲ್ (51) ಅವರು ತಮ್ಮ ಐದನೇ ವಯಸ್ಸಿನಲ್ಲಿ ಇಂಡೋನೇಷ್ಯಾಗೆ ತೆರಳಿ, ನಂತರ ಸಿಂಗಪುರಕ್ಕೆ ಹೋದರು. ಅಲ್ಲಿಂದ ಅಮೆರಿಕಕ್ಕೆ ತೆರಳಿದ್ದರು. ಈಗ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಮಿ ಬೆರಾ
ಅಮಿ ಬೆರಾ ಅವರು ಈಗಾಗಲೇ ಎರಡು ಬಾರಿ ಜನಪ್ರತಿನಿಧಿಗಳ ಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಅವರಿಗೆ ಮೂರನೇ ಚುನಾವಣೆ.

ರಾಜಾ ಕೃಷ್ಣಮೂರ್ತಿ
ನವದೆಹಲಿ ಮೂಲದವರಾದ ರಾಜಾ ಕೃಷ್ಣಮೂರ್ತಿ ಅವರು ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

ರೋಹಿತ್ ಖನ್ನಾ
ಇವರು ರೋ ಖನ್ನಾ ಎಂದೇ ಪ್ರಸಿದ್ಧರು. ಈ ಬಾರಿ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.