ಪ್ರಶ್ನೆ: ಮಗಳಿಗೆ 14 ವರ್ಷ. ಬಹಳ ಚುರುಕುಮತಿಯ ಹುಡುಗಿ. ಆದರೆ ಕೆಲವು ತಿಂಗಳಿನಿಂದ ಸದಾ ಅನ್ಯಮನಸ್ಕಳಾಗಿ ಇರುತ್ತಾಳೆ. ಊಟ, ತಿಂಡಿ, ಬಟ್ಟೆಬರೆ, ಓದು ಯಾವುದರಲ್ಲಿಯೂ ಆಸಕ್ತಿ ತೋರುತ್ತಿಲ್ಲ. ನಾನು ಸಿಂಗಲ್ ಮದರ್. ಅತ್ತ ಉದ್ಯೋಗ, ಇತ್ತ ಮನೆ ಜವಾಬ್ದಾರಿಯ ನಡುವೆ ಮಗಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಅವಳ ಸಮಸ್ಯೆ ಏನೆಂಬುದೇ ಅರ್ಥವಾಗುತ್ತಿಲ್ಲ. ಮನೋವೈದ್ಯರ ಬಳಿ ಹೋಗೋಣವೆಂದರೆ ಸುತರಾಂ ಬರಲು ತಯಾರಿಲ್ಲ. ಹರೆಯಕ್ಕೆ ಕಾಲಿಡುತ್ತಿರುವ ಮಗಳನ್ನು ಗದರುವುದೋ ಅವಳ ಸ್ಥಿತಿ ಕಂಡು ಮರುಕಪಡುವುದೋ ಅಥವಾ ಪಾಪಪ್ರಜ್ಞೆಯಿಂದ ನರಳುವುದೋ ತಿಳಿಯದಾಗಿದೆ. ಈ ಸಮಸ್ಯೆಯಿಂದ ಅವಳನ್ನು ಹೊರತರಲು ಏನು ಮಾಡಲಿ?

ರಮಾ, ಮಂಗಳೂರು

ಉತ್ತರ: ಹದಿಹರೆಯದವರ ಸಮಸ್ಯೆಗಳ ಬಗ್ಗೆ ಅನೇಕ ಲೇಖನಗಳು, ಪುಸ್ತಕಗಳು ಬಂದಿವೆ. ಆದರೂ ಈ ವಯಸ್ಸಿನಲ್ಲಿ ಬರುವ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ ಮಾತ್ರವಲ್ಲ, ಪರಿಹಾರ ಸುಲಭವಾಗಿ ಸಿಗುತ್ತಿಲ್ಲ. ಕಾರಣವೆಂದರೆ, ಎಲ್ಲರ ಸಮಸ್ಯೆಗಳೂ ಒಂದೇ ರೀತಿಯಾಗಿ ಕಂಡರೂ ಅವೆಲ್ಲವೂ ಭಿನ್ನವಾಗಿರುತ್ತವೆ. ಹಾಗಾಗಿ, ಎಲ್ಲ ಸಮಸ್ಯೆಗಳಿಗೂ ಒಂದೇ ರೀತಿಯ ಪರಿಹಾರ ಉಪಯೋಗಕ್ಕೆ ಬರದು. ಅದೇ ಮನಸ್ಸಿಗಿರುವ ವಿಶಿಷ್ಟ ಸ್ವಭಾವ. ಹಾಗಾಗಿಯೇ ಒಬ್ಬ ಮನಃಶಾಸ್ತ್ರಜ್ಞನಿಗೆ ಪ್ರತಿ ಸೆಷನ್ ಕೂಡಾ ಒಂದು ಪರೀಕ್ಷೆ ಇದ್ದಂತೆ. ಒಂದೊಂದು ಸೆಷನ್ನಲ್ಲೂ ಒಂದೇ ತರಹದ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಹುಡುಕಬೇಕಾಗುತ್ತದೆ.

ನಿಮ್ಮ ಪ್ರಶ್ನೆಯನ್ನು ಕೂಲಂಕಷವಾಗಿ ಗಮನಿಸಿದರೆ, ನಿಮ್ಮ ಮಗಳಲ್ಲಿ ಇಂತಹ ಬದಲಾವಣೆ ಕೆಲವು ತಿಂಗಳ ಹಿಂದೆಯೇ ಆರಂಭವಾಗಿರ
ಬಹುದೆಂಬುದು ತಿಳಿಯುತ್ತದೆ. ಅಂದರೆ, ಸಮಸ್ಯೆಯೂ ಅದೇ ಸಂದರ್ಭದಲ್ಲಿ ಉದ್ಭವವಾಗಿರಬಹುದು. ಅದು ಗೆಳೆಯ– ಗೆಳತಿಯರೊಂದಿಗಿನ ಸಮಸ್ಯೆ ಆಗಿರಬಹುದು, ಶಾಲೆಯಲ್ಲಿ ನಡೆದಿರುವಂತಹ ಯಾವುದೋ ಸನ್ನಿವೇಶ ಇರಬಹುದು ಅಥವಾ ಇನ್ಯಾವುದೋ ಕಾರಣ ಇರಬಹುದು. ಅದನ್ನು ನೀವು ನಿಧಾನವಾಗಿ ಆಕೆಯೊಡನೆ ಮಾತನಾಡಿ ಅರ್ಥೈಸಿಕೊಳ್ಳಬೇಕು. ಆಗ, ಸಮಸ್ಯೆಯ ಮೂಲವು ಅರಿವಿಗೆ ಬರುತ್ತದೆ. ಇಲ್ಲದಿದ್ದರೆ, ನಾವು ನಮ್ಮ ಕಲ್ಪನೆಯ ಆಧಾರದ ಮೇಲೆ, ಏನೋ ಮಾಡಲು ಹೋಗಿ ಇನ್ನೇನೋ ಆಗುವ ಸಾಧ್ಯತೆ ಇರುತ್ತದೆ. ಯಾಕೆ ಹೀಗೆ ಹೇಳುತ್ತಿದ್ದೇ
ನೆಂದರೆ, ಸುಮಾರು ಅದೇ ವಯಸ್ಸಿನ ಒಬ್ಬಳು ಬಾಲಕಿಯನ್ನು ಆಕೆಯ ತಂದೆ– ತಾಯಿ ನನ್ನ ಬಳಿ ಕರೆತಂದಿದ್ದರು. ಆಕೆಗೂ ಎಲ್ಲ ವಿಷಯಗಳಲ್ಲೂ ನಿರಾಸಕ್ತಿ. ಶಾಲೆಗೆ ಹೋಗುವುದಕ್ಕೂ ಮನಸ್ಸಿಲ್ಲದ ಮನಸ್ಸು. ಏನು ಮಾಡಲೂ ಉತ್ಸಾಹ ಇರಲಿಲ್ಲ. ಮಾತ್ರವಲ್ಲ, ಆಕೆ ತನ್ನ ಕೈಯ ನರವನ್ನು ಕೊಯ್ದುಕೊಳ್ಳುವುದಕ್ಕೆ ಕೂಡ ಮುಂದಾಗಿದ್ದಳು. ಕಾರಣದ ಮೂಲ ಹುಡುಕಿದಾಗ ತಿಳಿದದ್ದು ಏನೆಂದರೆ, ಬಹಳವಾಗಿ ಹಚ್ಚಿಕೊಂಡಿದ್ದ ಇಬ್ಬರು ಸ್ನೇಹಿತೆಯರೊಡನೆ ಆಕೆಗೆ ಏನೋ ಜಗಳವಾಗಿತ್ತು. ಆ ಕಾರಣಕ್ಕೆ ಅವರು ಆಕೆಯನ್ನು ದೂರ ಮಾಡಿದ್ದರು. ಆದ್ದರಿಂದ, ತನಗೆ ಇನ್ಯಾರಿದ್ದಾರೆ, ತಾನು ಒಬ್ಬಂಟಿಯಾದೆ, ಇದನ್ನು ಹೇಗೆ ಸಹಿಸಿಕೊಳ್ಳುವುದು ಎಂದೆಲ್ಲಾ ಚಿಂತಿಸಿ ಆಕೆ ತನ್ನ ವ್ಯಾಕುಲವನ್ನು ಹೆಚ್ಚಿಸಿಕೊಂಡಿದ್ದಳು. ಅಷ್ಟೇ ಅಲ್ಲ, ತೀವ್ರವಾದ ನಕಾರಾತ್ಮಕ ಚಿಂತನೆಗಳ ಜೊತೆಗೆ ತನ್ನನ್ನೇ ತಾನು ದೂಷಿಸಿಕೊಳ್ಳಲಾರಂಭಿಸಿದ್ದಳು.

ಈ ವಿಷಯ ತಿಳಿದಾಗ, ‘ಅಷ್ಟಕ್ಕೇ ಹೀಗೆಲ್ಲಾ ಆಡಬೇಕಾ? ಇನ್ನೂ ಹೆಚ್ಚು ಕಷ್ಟದಲ್ಲಿ ಇರುವವರು ಎಷ್ಟೋ ಜನ ಇರುತ್ತಾರೆ. ಹಾಗಿರುವಾಗ, ಇದೇನು ಮಹಾ?’ ಎಂದು ಅನ್ನಿಸಬಹುದು. ಆದರೆ, ಪ್ರತಿಯೊಬ್ಬರ ದೃಷ್ಟಿಕೋನ ಬೇರೆ ಬೇರೆ. ಒಬ್ಬರಿಗೆ ಮುಖ್ಯ ಎನ್ನಿಸಿದ್ದು ಇನ್ನೊಬ್ಬರಿಗೆ ಹಾಗೆ ಅನ್ನಿಸಬೇಕೆಂದಿಲ್ಲ. ಹಾಗೆಯೇ ಒಬ್ಬರಿಗೆ ನೋವುಂಟು ಮಾಡಿದಂತಹ ವಿಚಾರ ಇನ್ನೊಬ್ಬರಿಗೆ ನೋವುಂಟು ಮಾಡದೇ ಇರಬಹುದು. ಹೀಗೆ, ನಾವು ಪ್ರತಿಯೊಬ್ಬರೂ ವಿಭಿನ್ನ ವ್ಯಕ್ತಿಗಳು.

ಹೀಗಾಗಿ, ನಿಮ್ಮ ಮಗಳ ಮನದ ಆಳದಲ್ಲಿ ಏನು ಅಡಗಿದೆ ಎಂಬುದನ್ನು ಹುಡುಕಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮನೋವೈದ್ಯರ ಬಳಿ ಕರೆದುಕೊಂಡು ಹೋಗಬಹುದು. ಆದರೆ, ಬಹುಶಃ ಆಕೆ ನಿಮ್ಮ ಸಮಯವನ್ನು ಬಯಸುತ್ತಿದ್ದಾಳೆ. ಯಾವುದಾದರೂ ವಾರದ ರಜೆಯ ದಿನ ಸ್ವಲ್ಪ ಬಿಡುವು ಮಾಡಿಕೊಂಡು, ಆಕೆಯನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗಿ, ಮುಕ್ತವಾಗಿ ಮಾತನಾಡಿ ಮತ್ತು ಮಾತನಾಡುವುದಕ್ಕೆ ಅವಕಾಶ ಕೊಡಿ. ಆಮೇಲಷ್ಟೇ ಪರಿಹಾರವನ್ನು ಕಂಡುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.