ಮುಂಬೈ: ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಯ ‘ಟೆಕ್ನೊ ಸ್ಪಾರ್ಕ್ ಗೊ 3’ ಎಂಬ ಸ್ಮಾರ್ಟ್ಫೋನ್ ಇದೇ ಜನವರಿಯ ಮೂರನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಕಂಪನಿ ಘೋಷಿಸಿದೆ.

ಇದಕ್ಕೆ ಸಂಬಂಧಿಸಿದ ಮೈಕ್ರೊಸೈಟ್ ಅನ್ನು ಕಂಪನಿ ಈಗಾಗಲೇ ಆರಂಭಿಸಿದೆ. ಸ್ಮಾರ್ಟ್ಫೋನ್ ಹೇಗಿರಲಿದೆ, ವಿನ್ಯಾಸ ಹೇಗಿದೆ ಮತ್ತು ಅದರಲ್ಲಿರುವ ಸೌಕರ್ಯಗಳೇನು ಎಂಬಿತ್ಯಾದಿ ಮಾಹಿತಿ ಇದರಲ್ಲಿದೆ.

2025ರ ಜೂನ್ನಲ್ಲಿ ಟೆಕ್ನೊ ಸ್ಪಾರ್ಕ್ ಗೊ 2 ಸ್ಮಾರ್ಟ್ಫೋನ್ ಬಿಡುಗಡೆಯಾಗಿತ್ತು. 6.67 ಇಂಚುಗಳ ಎಚ್ಡಿ ಪ್ಲಸ್ ಡಿಸ್ಪ್ಲೇ ಇದರದ್ದಾಗಿತ್ತು. ಜತೆಗೆ 120 ಹರ್ಟ್ಜ್ ರಿಫ್ರೆಶ್ ರೇಟ್ ಕೂಡಾ ಹೊಂದಿತ್ತು. 5 ಸಾವಿರ ಎಂಎಎಚ್ ಬ್ಯಾಟರಿ ಮತ್ತು ಯುನಿಸ್ಕೊ ಟಿ7250 ಚಿಪ್ಸೆಟ್ ಆ ಸ್ಮಾರ್ಟ್ಫೋನ್ನಲ್ಲಿತ್ತು.

ಇದೀಗ ಟೆಕ್ನೊ ಸ್ಪಾರ್ಕ್ ಗೊ 3 ಸ್ಮಾರ್ಟ್ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿರುವ ಕಂಪನಿ ಜ. 16ಕ್ಕೆ ದಿನಾಂಕ ನಿಗದಿಪಡಿಸಿದೆ.

ಈ ನೂತನ ಸ್ಮಾರ್ಟ್ಫೋನ್ನ ಹಿಂಬದಿ ಕ್ಯಾಪ್ಸೂಲ್ ಆಕಾರದಲ್ಲಿ ಕ್ಯಾಮೆರಾ ಇದೆ. ಇನ್ಫ್ರಾರೆಡ್ ಸೆನ್ಸರ್ ಜತೆಗಿದೆ. ಸ್ಪೀಕರ್ ಗ್ರಿಲ್ ಫೋನ್ನ ಮೇಲ್ಭಾಗದಲ್ಲಿ ನೀಡಲಾಗಿದೆ. ಲೋಹದ ಫ್ರೇಮ್ ಇದರದ್ದಾಗಿದೆ. ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್ಗಳು ಫೋನ್ನ ಬಲಭಾಗದಲ್ಲಿ ನೀಡಲಾಗಿದೆ. ಫೋನ್ನ ಹಿಂಭಾಗದ ಮಧ್ಯದಲ್ಲಿ ಟೆಕ್ನೊ ಲೊಗೊ ಅಳವಡಿಸಲಾಗಿದೆ.

1.2 ಮೀಟರ್ ಎತ್ತರದಿಂದ ಕೆಳಗೆ ಬಿದ್ದರೂ ಫೋನ್ಗೆ ಏನೂ ಆಗದು ಎಂದು ಕಂಪನಿ ಹೇಳಿಕೊಂಡಿದೆ. ದೂಳು ಮತ್ತು ನೀರಿನ ಹನಿಗಳು ಫೋನ್ಮೇಲೆ ಬಿದ್ದರೂ ಅದನ್ನು ಸಹಿಸಿಕೊಳ್ಳುವ ಐಪಿ64 ರೇಟಿಂಗ್ ನೀಡಲಾಗಿದೆ. ಆಫ್ಲೈನ್ ಕರೆ ಸೌಕರ್ಯದ ಮೂಲಕ ಟೆಕ್ನೊ ಫೋನ್ ಬಳಕೆದಾರರು 1.5 ಕಿ.ಮೀ. ವ್ಯಾಪ್ತಿಯೊಳಗೆ ನೆಟ್ವರ್ಕ್ ಇಲ್ಲದೆ ಮಾತನಾಡಬಹುದಾದ ಸೌಕರ್ಯವನ್ನು ಕಂಪನಿ ನೀಡಿದೆ.

ನಾಲ್ಕು ವರ್ಷಗಳವರೆಗೆ ಫೋನ್ ವಿಳಂಬವಾಗದಂತೆ ‘ಲ್ಯಾಗ್ ಫ್ರೀ ಪರ್ಫಾರ್ಮೆನ್ಸ್’ ಖಾತ್ರಿಯನ್ನು ನೀಡುವುದಾಗಿ ಕಂಪನಿ ಹೇಳಿದೆ.

ಕಳೆದ ವರ್ಷ ಟೆಕ್ನೊ ಸ್ಪಾರ್ಕ್ ಗೊ 2 ಬಿಡುಗಡೆಯಾಗಿತ್ತು. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಫೋನ್ಗೆ ಕಂಪನಿಯು ₹6,999 ದರವನ್ನು ನಿಗದಿಪಡಿಸಿತ್ತು. ಈ ವರ್ಷ ಬಿಡುಗಡೆಯಾಗುತ್ತಿರುವ ಟೆಕ್ನೊ ಸ್ಪಾರ್ಕ್ ಗೊ 3 ಫೋನ್ನ ಬೆಲೆಯನ್ನು ಕಂಪನಿ ಎಷ್ಟಕ್ಕೆ ನಿಗದಿಪಡಿಸಲಿದೆ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.