ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉಳಿಸುವ ದೀಪಗಳು!

Last Updated 11 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಇಂದು ಹಳ್ಳಿಯೂ ಸೇರಿದಂತೆ ನಗರಗಳಲ್ಲಿ ವಿದ್ಯುತ್ ಇಲ್ಲದೆ ನಿತ್ಯ ಜೀವನದ ಬಹಳಷ್ಟು ಕೆಲಸಗಳೇ ಆಗುವುದಿಲ್ಲ. ಗಂಟೆಗಟ್ಟಲೆ ವಿದ್ಯುತ್‌ ಕೈಕೊಟ್ಟರಂತೂ ಜೀವನವೇ ದುಸ್ತರ ಎನಿಸುತ್ತದೆ. ಹೆಚ್ಚಿನ ಎಲ್ಲಾ ಕೆಲಸಗಳೂ ವಿದ್ಯುತ್  ಸಹಾಯದಿಂದಲೇ ನಡೆಯುತ್ತವೆ. ಆದರೆ ವಿದ್ಯುತ್ ಅಭಾವ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಪರ್ಯಾಯ ಇಂಧನ ಮೂಲಗಳನ್ನು, ನವೀಕೃತ ಸಂಪನ್ಮೂಲಗಳ ಬಗ್ಗೆಯೂ ಅಲ್ಲಲ್ಲಿ ಪ್ರಯೋಗಗಳು ನಡೆಯುತ್ತಿವೆ.

ಮನೆಗಳಲ್ಲಿಯೂ ವಿದ್ಯುತ್ ಮಿತವಾಗಿ ಬಳಸಲು ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಇದರಿಂದ ವಿದ್ಯುತ್‌ ಬೇಡಿಕೆ ಮೇಲಿನ ಒತ್ತಡವೂ ತಗ್ಗುತ್ತದೆ, ಹಣವೂ ಉಳಿತಾಯವಾಗುತ್ತದೆ.

ಉದ್ಯಾನಕ್ಕೆ ಸೌರದೀಪ
ಸಾಮಾನ್ಯವಾಗಿ ನಗರಗಳಲ್ಲಿ ದೊಡ್ಡ ದೊಡ್ಡ ಮನೆಗಳ ಮುಂದೆ ಹಸಿರ ರಾಶಿ, ಸುಂದರವಾದ ಉದ್ಯಾನವನ ಇರುತ್ತವೆ. ಇಲ್ಲಿ ರಾತ್ರಿ ಹೊತ್ತು ಹೊಳೆಯುವ ಬಲ್ಬ್ ಹಾಕಿರುತ್ತಾರೆ. ಇದಕ್ಕೆ ವಿದ್ಯುತ್ ಬಳಸುವ ಬದಲು ಸೌರಶಕ್ತಿ ಗಾರ್ಡನ್ ಬಲ್ಬ್ ಅಳವಡಿಸಬಹುದು. ಸೂರ್ಯನ ಬೆಳಕಿನಲ್ಲಿ ಕಾದು ಅದರಲ್ಲಿರುವ ಸೆನ್ಸರ್‌ನಿಂದ ರಾತ್ರಿ ಹೊತ್ತು ದೀಪ ಸಹಜವಾಗಿ ಉರಿಯುತ್ತದೆ.

ಮಿತವ್ಯಯಿ ಬಲ್ಬ್
ಮನೆಗಳಲ್ಲಿ ಸಾಮಾನ್ಯ ವೋಲ್ಟ್ ಬಲ್ಬ್ ಉಪಯೋಗಿಸುವುದರಿಂದ ಅಧಿಕ ವಿದ್ಯುತ್ ಖರ್ಚಾಗುತ್ತದೆ. ಬದಲಿಗೆ ಎಲ್‌ಇಡಿ ಬಲ್ಬ್, ಸೀಲಿಂಗ್ ದೀಪಗಳು ಉತ್ತಮ ಬೆಳಕು ನೀಡುವುದರ ಜೊತೆಗೆ ವಿದ್ಯುತ್‌ ಉಳಿತಾಯ ಕೂಡ ಆಗುತ್ತದೆ. ಮೊಸೈಕ್ ಗಾಜಿನ ಸೀಲಿಂಗ್ ದೀಪ, ಫಾಸ್ ಬೆಳಕಿನ ಹಿತ್ತಾಳೆ ದೀಪವನ್ನು ಮನೆಗಳಲ್ಲಿ ಅಳವಡಿಸಿ ನೋಡಿ. ಖರೀದಿ ವೇಳೆ ಇವು ದುಬಾರಿ ಎನಿಸಿದರೂ ವಿದ್ಯುತ್‌ ಮಿತವ್ಯಯ ಲೆಕ್ಕಹಾಕಿದರೆ ಕೆಲವೇ ತಿಂಗಳಿನಲ್ಲಿ ಬಿಲ್‌ನಲ್ಲಿ ಸಾಕಷ್ಟು ಉಳಿತಾಯವೂ ಆಗಿರುತ್ತದೆ.

ಎಮರ್ಜೆನ್ಸಿ ಲೈಟ್
ಸೌರಶಕ್ತಿಚಾಲಿತ ಎಮರ್ಜೆನ್ಸಿ ದೀಪದಲ್ಲಿ ಸೂರ್ಯನ ಬೆಳಕಿನಿಂದ ಬೆಳಕು ಮೂಡಿಸಬಹುದು. ಹೀಗೆ ವಿದ್ಯುತ್ ಉಳಿತಾಯ ಮಾಡಬಹುದು.

ಸೌರಶಕ್ತಿ ಚಾಲಿತ ಬ್ಯಾಟರಿ
ವಿದ್ಯುತ್‌ಗೆ ಬದಲಾಗಿ Scosche Solbat 2- ಸೌರಶಕ್ತಿಚಾಲಿತ ಬ್ಯಾಕಪ್ ಬ್ಯಾಟರಿ ಮತ್ತು ಚಾರ್ಜರ್‌ನಿಂದ ಬೆಳಕು ಉಪಯೋಗಿಸಿದರೆ ಪರಿಸರಕ್ಕೆ ಪೂರಕವಾಗಿರುತ್ತದೆ ಹಾಗೂ ವಿದ್ಯುತ್‌ನ ಉಳಿತಾಯವೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT